ಫ್ರಾಂಚೈಸಿ ನೀಡುವುದಾಗಿ ವಂಚನೆ: ಇಡ್ಲಿಗುರು ಹೋಟೆಲ್ ಮಾಲೀಕ ಅರೆಸ್ಟ್

Prasthutha|

ಬೆಂಗಳೂರು : ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ವಂಚಿಸಿದ ಆರೋಪದ ಮೇಲೆ ಖ್ಯಾತ ತಿಂಡಿ ಹೋಟೆಲ್ ಇಡ್ಲಿಗುರು ಮಾಲೀಕ ಕಾರ್ತಿಕ್ ಶೆಟ್ಟಿಯನ್ನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

- Advertisement -


ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚಿಸಲಾಗಿದೆ ಎಂದು ಚೇತನ್ ಎಂಬುವವರು ನೀಡಿದ ದೂರು ಆಧರಿಸಿ ಇಡ್ಲಿಗುರು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್ ಎಂಬಾತನ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.


ಚೇತನ್ ಅವರನ್ನ ನಂಬಿಸಿದ್ದ ಆರೋಪಿಗಳು, ಆತನ ಬಳಿ ಬರೊಬ್ಬರಿ ಮೂರು ಲಕ್ಷ ರೂ. ಪಡೆದಿದ್ದರು. ಫುಡ್ ಕಾರ್ಟ್ ತಂದು ನಿಲ್ಲಿಸಿ. ಅದು ಸ್ವಲ್ಪ ದಿನಗಳ ಬಳಿಕ ವ್ಯಾಪಾರ ಆಗುತ್ತಿಲ್ಲ ಎಂದು ಬೇರೆಡೆ ವ್ಯಾಪಾರ ಮಾಡೋಣ ಎಂದು ಶಿಫ್ಟ್ ಮಾಡಿದ್ದರು. ಇದೀಗ ಅಂಗಡಿಗಾಗಿ ಖರ್ಚಾದ ಹಣವನ್ನೂ ನೀಡದೆ ಮೋಸ ಎಸಗಿದ್ದಾರೆ. ಇದೆಲ್ಲವಾದ ಬಳಿಕ ಆರೋಪಿಗಳನ್ನ ಭೇಟಿಯಾಗಿ ವಿಚಾರಿಸಿದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಕೇಸ್ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದು ಕರೆತರುತ್ತಿದ್ದಾರೆ.

Join Whatsapp