ದುಬೈ ; ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತು ಮುಕ್ತಾಯಗೊಂಡಿದ್ದು, ಸೂಪರ್-12 ಚಿತ್ರಣ ಹೊರಬಿದ್ದಿದೆ.A ಹಾಗೂ B ಗುಂಪಿನಿಂದ ಸ್ಪರ್ಧಿಸಿದ್ದ ಎಂಟು ತಂಡಗಳ ಪೈಕಿ ಒಟ್ಟು 4 ತಂಡಗಳು ‘ಸೂಪರ್-12’ ಹಂತಕ್ಕೆ ಅರ್ಹತೆ ಪಡೆದಿವೆ.
ಅರ್ಹತಾ ಸುತ್ತಿನಲ್ಲಿ ಎಲ್ಲಾ 3 ಪಂದ್ಯಗಳಲ್ಲೂ ಗೆದ್ದು ಬೀಗಿದ ಶ್ರೀಲಂಕಾ ತಂಡ A ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್-12 ಹಂತಕ್ಕೆ ಎಂಟ್ರಿ ಕೊಟ್ಟಿದೆ.ಆ ಮೂಲಕ ಶ್ರೀಲಂಕಾ, ಸೂಪರ್-12ರ ಹಂತದಲ್ಲಿ ‘ಗ್ರೂಪ್ 1’ರಲ್ಲಿ ಸ್ಥಾನಪಡೆದಿದೆ.
ಇನ್ನು B ಗುಂಪಿನಲ್ಲಿ ಅಗ್ರಸ್ಥಾನಿಯಾಗಿರುವ ಸ್ಕಾಟ್ಲೆಂಡ್ ತಂಡ ಸೂಪರ್-12ರಲ್ಲಿ ‘ಗ್ರೂಪ್ 2’ರಲ್ಲಿ ಕಾಣಿಸಿಕೊಂಡಿದೆ.ಉಳಿದಂತೆ A ಗುಂಪಿನ ಎರಡನೇ ತಂಡ ನಮೀಬಿಯಾ ‘ಗ್ರೂಪ್ 2’ ಹಾಗೂ B ಗುಂಪಿನ ಎರಡನೇ ತಂಡ ಬಾಂಗ್ಲಾದೇಶ ‘ಗ್ರೂಪ್ 1’ರಲ್ಲಿ ಸ್ಥಾನ ಪಡೆದಿದೆ.

ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿರುವ ಟೀಮ್ ಇಂಡಿಯಾ, ‘ಗ್ರೂಪ್ 2’ನ
ಮೊದಲ ಹೈವೋಲ್ಟೇಜ್ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಬಳಿಕ
ನವೆಂಬರ್ 5 ರಂದು ಸ್ಕಾಟ್ಲೆಂಡ್ ಹಾಗೂ ನ. 8 ರಂದು ನಮೀಬಿಯಾ ವಿರುದ್ಧ ಆಡಲಿದೆ.
ಸೂಪರ್-12 ‘ಗ್ರೂಪ್ 1’
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ,
ಸೂಪರ್-12 ‘ಗ್ರೂಪ್ 2‘
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಗಾನಿಸ್ತಾನ, ಸ್ಕಾಟ್ಲೆಂಡ್, ನಮೀಬಿಯಾ