ಮೊಘಲರ ಕಾಲದ ವಜ್ರ ಖಚಿತ ಕನ್ನಡಕ ಹರಾಜು: ಇದರ ಬೆಲೆ ಎಷ್ಟು ಗೊತ್ತೇ ?

Prasthutha|

ಲಂಡನ್: ಮೊಘಲರ ಕಾಲದ ಅಪರೂಪದ ವಜ್ರ ಮತ್ತು ಹಸಿರು ಕನ್ನಡಕವನ್ನು ಅಕ್ಟೋಬರ್ 27ರಂದು ಲಂಡನ್ ನಲ್ಲಿ ಹರಾಜು ಹಾಕಲಾಗುತ್ತದೆ. ಮೊಘಲರ ಕಾಲದ ಈ ಕನ್ನಡಕದ ಫ್ರೇಮ್ ನಲ್ಲಿ ವಜ್ರದ ಲೆನ್ಸ್ ಗಳನ್ನು ಹಾಕಲಾಗಿದೆ. ಈ ಕನ್ನಡಕ ಹರಾಜಿನಲ್ಲಿ ಸುಮಾರು 15 ಕೋಟಿಯಿಂದ 25 ಕೋಟಿ ರೂಪಾಯಿಗೂ ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆ ಎಂದು ಸೋಥೆಬಿಸ್ ಹರಾಜು ಸಂಸ್ಥೆ ತಿಳಿಸಿದೆ.

- Advertisement -


ಕನ್ನಡಕ ಮಾರಾಟ ಮಾಡುವ ಮೊದಲು ಹಾಂಗ್ ಕಾಂಗ್ ಮತ್ತು ಲಂಡನ್ ನಲ್ಲಿ ಪ್ರದರ್ಶಿಸಲಾಗುತ್ತದೆ. ವಜ್ರ ಖಚಿತ ಕನ್ನಡಕ 16 ಮತ್ತು 17 ನೇ ಶತಮಾನಗಳಲ್ಲಿ ಉಪಖಂಡವನ್ನು ಆಳಿದ ಮತ್ತು ಶ್ರೀಮಂತ ಕಲಾತ್ಮಕ ಹಾಗೂ ವಾಸ್ತುಶಿಲ್ಪದ ಸಾಧನೆಗಳಿಗೆ ಹೆಸರುವಾಸಿಯಾದ ರಾಜವಂಶದ ಮೊಘಲರಿಗೆ ಸೇರಿರಬಹುದು ಎಂದು ಹೇಳಲಾಗಿದೆ.

ಕನ್ನಡಕ್ಕೆ ಅಳವಡಿಸಿರುವ ಗ್ಲಾಸ್ ಗಳು ಒಂದೇ ನೈಸರ್ಗಿಕ ವಜ್ರದಿಂದ ತಯಾರಿಸಲಾಗಿದೆ. ಪಚ್ಚೆ ಹಸಿರಿನ ವಜ್ರಗಳು ಕೆಟ್ಟದ್ದನ್ನು ತಡೆಯಲು ಪವಾಡದ ಶಕ್ತಿಯನ್ನು ಹೊಂದಿವೆ ಎಂದು ಕೆಲವರು ನಂಬುತ್ತಾರೆ.

Join Whatsapp