ಐಸಿಸಿ ಟಿ20 ರ‍್ಯಾಂಕಿಂಗ್‌ ಪ್ರಕಟ | ಅಗ್ರಸ್ಥಾನಕ್ಕೇರಿದ ಸೂರ್ಯಕುಮಾರ್‌ ಯಾದವ್‌

Prasthutha|

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ನೂತನ ಟಿ20 ರ‍್ಯಾಂಕಿಂಗ್‌ ಪಟ್ಟಿ‌ ಬಿಡುಗಡೆ ಮಾಡಿದ್ದು, ಭಾರತದ ಭರವಸೆಯ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್ (836 ಅಂಕ) ಅಗ್ರಸ್ಥಾನ ಪಡೆದಿದ್ದಾರೆ.  ಈ ಹಾದಿಯಲ್ಲಿ ಯಾದವ್‌, ಪಾಕಿಸ್ತಾನದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮುಹಮ್ಮದ್‌ ರಿಝ್ವಾನ್‌ (792 ಅಂಕ) ಅವರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ ನಂ.1 ಟಿ20 ಬ್ಯಾಟ್ಸ್‌ಮನ್‌ ಪಟ್ಟವನ್ನೇರಿದ 2ನೇ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ.

- Advertisement -

ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ (792 ಅಂಕ) ಮೂರನೇ ಸ್ಥಾನದಲ್ಲಿದ್ದಾರೆ. ಟೀಮ್‌ ಇಂಡಿಯಾದ ಮತ್ತೋರ್ವ ಬ್ಯಾಟ್ಸ್‌ಮನ್‌ ವಿರಾಟ್ ಕೊಹ್ಲಿ, 638 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಟೀಮ್‌ ಇಂಡಿಯಾ ಪಟ ಚೊಚ್ಚಲ ಟಿ20 ಪಂದ್ಯವನ್ನಾಡಿದ್ದ ಯಾದವ್‌, ಇದುವರೆಗೂ ಒಟ್ಟು 38 ಪಂದ್ಯಗಳಿಂದ 1209 ರನ್ ಗಳಿಸಿದ್ದಾರೆ . ಇದರಲ್ಲಿ 1 ಶತಕ ಮತ್ತು 11 ಅರ್ಧಶತಕಗಳು ಸೇರಿವೆ. ಆ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಭರವಸೆಯ ಬ್ಯಾಟ್ಸ್‌ಮನ್‌ ಆಗಿ ಮೂಡಿಬಂದಿದ್ದಾರೆ.  

- Advertisement -

32ರ ಹರೆಯದ ಯಾದವ್, ಭಾರತದ ಪರ 13 ಏಕದಿನ ಪಂದ್ಯಗಳನ್ನೂ ಆಡಿದ್ದು, 2 ಅರ್ಧಶತಕ ಸೇರಿದಂತೆ 340 ರನ್‌ಗಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೂರ್ಯಕುಮಾರ್‌,ದಕ್ಷಿಣ ಆಫ್ರಿಕಾ ಮತ್ತು ನೆದರ್‌ಲ್ಯಾಂಡ್ಸ್‌ ವಿರುದ್ಧದ ಪಂದ್ಯದಲ್ಲಿ  ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. 



Join Whatsapp