ನಾವು ಕೊರೋನಾ ಚುಚ್ಚುಮದ್ದು ಒದಗಿಸಿದ್ದೇವೆ, ನಮಗೆ ವೋಟ್ ಹಾಕಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

Prasthutha|

ಬಿಲಾಸ್’ಪುರ: ಮುಂದಿನ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ವೋಟ್ ಪಡೆಯಲು ಬಿಜೆಪಿ ಪಕ್ಷವು ಆರೋಗ್ಯದ ಹಕ್ಕನ್ನು ಬಳಸಿ ಹೊಸ ಚುನಾವಣಾ ಗಿಮಿಕ್’ಗೆ ಪ್ರಯತ್ನಿಸಿದ್ದು, ನಿಮಗೆ ನಾವು ಕೊರೋನಾ ಚುಚ್ಚುಮದ್ದು ಒದಗಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನೀವು ನಮಗೆ ವೋಟ್ ಹಾಕಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

- Advertisement -

ಬಿಲಾಸ್’ಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಒಂಬತ್ತು ತಿಂಗಳಲ್ಲಿ ಕೊರೋನಾ ರೋಗಕ್ಕೆ 2 ಚುಚ್ಚುಮದ್ದನ್ನು ರೆಡಿ ಮಾಡಿದರು ಮತ್ತು ಪ್ರತಿಯೊಬ್ಬರಿಗೂ ಡಬಲ್ ಡೋಸ್, ಬೂಸ್ಟರ್ ಡೋಸ್ ಹಾಕಿ ಜನರನ್ನು ರಕ್ಷಿಸಿದ್ದಾರೆ. ನಿಮ್ಮನ್ನು ರಕ್ಷಿಸಿದವರನ್ನು ಗೆಲ್ಲಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ತಿಳಿಸಿದರು.

ಹಿಮಾಚಲ ಪ್ರದೇಶ ವಿಧಾನಸಭ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ನವೆಂಬರ್ 4ರಂದು ನಡ್ಡಾ ಬಿಡುಗಡೆಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ಅಲ್ಲದೆ ಪ್ರಧಾನಿ ಮೋದಿ ಅವರು ನವೆಂಬರ್ 5 ಮತ್ತು 9ರಂದು 2 ಎರಡು ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

68 ಸದಸ್ಯರ ಸಂಖ್ಯಾಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ಫೆಬ್ರವರಿ 12ರಂದು ಚುನಾವಣೆ ನಿಗದಿಯಾಗಿದೆ.

Join Whatsapp