ಕ್ರಿಕೆಟ್‌ ನಿಯಮಗಳಲ್ಲಿ ಮತ್ತಷ್ಟು ಬದಲಾವಣೆಗೆ ಮುಂದಾದ ಐಸಿಸಿ, ಏನೆಲ್ಲಾ ಬದಲಾವಣೆ? ಇಲ್ಲಿದೆ ಮಾಹಿತಿ

Prasthutha|

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, [ಐಸಿಸಿ] ಕ್ರಿಕೆಟ್‌ ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದ್ದು, ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ಸಮಿತಿಯು ಮಾಡಿದ ಶಿಫಾರಸುಗಳನ್ನು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿ ಅನುಮೋದಿಸಿದೆ.

- Advertisement -

ಅಕ್ಟೋಬರ್‌ 1ರಿಂದ ಏನೆಲ್ಲಾ ಬದಲಾವಣೆ ?

  1. ಚೆಂಡಿಗೆ ಉಗುಳುವಂತಿಲ್ಲ:  ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಆಟಗಾರರು ಅದರಲ್ಲೂ ವಿಶೇಷವಾಗಿ ಬೌಲರ್‌ಗಳು ಚೆಂಡಿಗೆ ಉಗುಳು ಸವರುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.  ಕೋವಿಡ್​ನಿಂದಾಗಿ ಕಳೆದ ಎರಡು ವರ್ಷಗಳಿಂದ ಈ ನಿಯಮ ಜಾರಿಯಲ್ಲಿದ್ದು. ಅಕ್ಟೋಬರ್‌1ರಿಂದ  ಈ ನಿಯಮ ಶಾಶ್ವತವಾಗಿ ಜಾರಿಗೆ ಬರಲಿದೆ.
  2. ಬ್ಯಾಟ್ಸ್‌ಮನ್‌ಗಳು ಕ್ಯಾಚ್ ನೀಡಿ ವಿಕೆಟ್‌ ಒಪ್ಪಿಸಿ ಮರಳಿದಾಗ, ಮತ್ತೊಂದು ತುದಿಯಲ್ಲಿರುವ ಬ್ಯಾಟ್ಸ್‌ಮನ್‌ ಪಿಚ್‌ನ ಅರ್ಧ ಭಾಗ ದಾಟಿದ್ದರೂ ಸಹ, ಇನ್ನು ಮುಂದೆ ಸ್ಟ್ರೈಕ್‌  ತೆಗೆದುಕೊಳ್ಳಲು ಅವಕಾಶವಿಲ್ಲ. ಮೈದಾನಕ್ಕಿಳಿಯುವ ಹೊಸ ಬ್ಯಾಟ್ಸ್‌ಮನ್‌ ಸ್ಟ್ರೈಕ್‌ನಲ್ಲಿ ಆಡಬೇಕು. (ಓವರ್ ನಂತರದ ಬದಲಾವಣೆ ಹೊರತುಪಡಿಸಿ) ಈ ಮೊದಲು ಅರ್ಧ ಪಿಚ್ ದಾಟಿದರೆ ಸ್ಟ್ರೈಕ್‌ ಬದಲಾಗುತ್ತಿತ್ತು.
  3. 90 ಸೆಕೆಂಡುಗಳಲ್ಲಿ ಸ್ಟ್ರೈಕ್‌ :  ಹೊಸ ಬ್ಯಾಟ್ಸ್‌ಮನ್‌ ನಿಧಾನಗತಿಯಲ್ಲಿ ಕ್ರೀಸ್‌ಗೆ ಆಗಮಿಸುವಂತಿಲ್ಲ. ಎರಡು ನಿಮಿಷಗಳಲ್ಲಿ ಸ್ಟ್ರೈಕ್ ತೆಗೆದುಕೊಳ್ಳಲು ಸಿದ್ಧರಾಗಬೇಕು. ಇದು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗೆ ಮಾತ್ರ ಅನ್ವಯ. ಆದರೆ ಟಿ20 ಪಂದ್ಯಗಳಲ್ಲಿ ತೊಂಬತ್ತು ಸೆಕೆಂಡುಗಳ ಪ್ರಸ್ತುತ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
  4. ಮಂಕಡಿಂಗ್ ಕಾನೂನುಬದ್ಧ : “ಅನ್‌ಫೇರ್ ಪ್ಲೇ’ ವಿಭಾಗದಿಂದ “ರನ್ ಔಟ್’ ವಿಭಾಗಕ್ಕೆ ಮಂಕಡಿಂಗ್ ಅನ್ನು ಸೇರಿಸಲಾಗಿದೆ. ಅಂದರೆ, ಬೌಲರ್‌ ಕೈಯಿಂದ ಚೆಂಡು ಬಿಡುಗಡೆಯಾಗುವ ಮುನ್ನವೇ ನಾನ್ ಸ್ಟ್ರೈಕರ್‌ನಲ್ಲಿರುವ ಬ್ಯಾಟ್ಸ್‌ಮನ್‌ ಕ್ರೀಸ್ ಬಿಟ್ಟರೆ ಔಟ್ ಮಾಡುವ ಅವಕಾಶ ನೀಡಲಾಗಿದೆ. ಇದೀಗ ಇದನ್ನು ರನೌಟ್ ಎಂದು ಮಾನ್ಯ ಮಾಡಲಾಗಿದೆ. ಈ ಮೊದಲು ಇದನ್ನು ಕ್ರೀಡಾಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗಿತ್ತು.
  5. ಕ್ಷೇತ್ರರಕ್ಷಕರ ಅನಗತ್ಯ ಚಲನೆಗೆ ದಂಡ: ಬೌಲಿಂಗ್‌ ವೇಳೆ ಕ್ಷೇತ್ರ ರಕ್ಷಣೆಯಲ್ಲಿರುವವರು ಅನಗತ್ಯವಾಗಿ  ಸ್ಥಾನ ಬದಲಾವಣೆ ಮಾಡಿದರೆ, ಫೀಲ್ಡರ್‌ಗಳ ಚಲನೆಯಲ್ಲಿ ವ್ಯತ್ಯಾಸ ಕಂಡು ಬಂದಾಗ  ಅದನ್ನು ಡೆಡ್​​ ಬೌಲ್ ಎಂದು ಘೋಷಿಸುವ​ ಅಥವಾ 5 ರನ್‌ ಪೆನಾಲ್ಟಿ​ ನೀಡುವ ಅಧಿಕಾರ ನಿರ್ಣಾಯಕರಿಗೆ ನೀಡಲಾಗಿದೆ.
  6. ಅತಿರೇಕದ ವರ್ತನೆಗೆ ಬ್ರೇಕ್‌: ಬ್ಯಾಟ್ಸ್‌ಮನ್‌ ವಿರುದ್ಧ ಬೌಲರ್‌ಗಳು ಅತಿರೇಕದ ವರ್ತನೆ ತೋರಿದರೆ,  ಅಂಪೈರ್​ ಡೆಡ್​ಬಾಲ್​​ ಅಥವಾ ನೋ ಬಾಲ್ ಎಂದು ಘೋಷಣೆ ಮಾಡುವ ನಿರ್ಧಾರ ಕೈಗೊಳ್ಳಬಹುದು.
  7. ಜನವರಿ 2022ರಲ್ಲಿ ಟಿ20 ಪಂದ್ಯಗಳಲ್ಲಿ ಪರಿಚಯಿಸಲಾದ ಪಂದ್ಯದ ಮೇಲಿನ ಪೆನಾಲ್ಟಿ, (ನಿಗದಿತ ವಿರಾಮದ ಸಮಯದಲ್ಲಿ ಫೀಲ್ಡಿಂಗ್ ತಂಡವು ತಮ್ಮ ಓವರ್‌ಗಳನ್ನು ಬೌಲ್ ಮಾಡಲು ವಿಫಲವಾದರೆ ಹೆಚ್ಚುವರಿ ಫೀಲ್ಡರ್ ಅನ್ನು ಫೀಲ್ಡಿಂಗ್ ವೃತ್ತದೊಳಗೆ ಉಳಿದಿರುವ ಓವರ್‌ಗಳಿಗೆ ಕರೆತರಬೇಕಾಗುತ್ತದೆ) 2023ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್, ಸೂಪರ್ ಲೀಗ್ ಪೂರ್ಣಗೊಂಡ ನಂತರ ಏಕದಿನ ಪಂದ್ಯಗಳಲ್ಲೂ ಈ ನಿಯಮ ಜಾರಿಗೆ ಬರಲಿದೆ.
  8. ಹೈಬ್ರಿಡ್ ಪಿಚ್‌: ಎರಡೂ ತಂಡಗಳು ಒಪ್ಪಿಕೊಂಡರೆ, ಎಲ್ಲಾ ಪುರುಷರ ಮತ್ತು ಮಹಿಳೆಯರ ಏಕದಿನ ಮತ್ತು ಟಿ20 ಪಂದ್ಯಗಳ ಆಟದ ಪರಿಸ್ಥಿತಿಗಳನ್ನು ಹೈಬ್ರಿಡ್ ಪಿಚ್‌ಗಳನ್ನು ಬಳಸಲು ಅನುಮತಿಸಲು ತಿದ್ದುಪಡಿ ಮಾಡಲಾಗುವುದು ಎಂದು ನಿರ್ಧರಿಸಲಾಯಿತು. ಪ್ರಸ್ತುತ ಹೈಬ್ರಿಡ್ ಪಿಚ್‌ಗಳನ್ನು ಮಹಿಳಾ ಟಿ20 ಪಂದ್ಯಗಳಲ್ಲಿ ಮಾತ್ರ ಬಳಸಬಹುದಾಗಿದೆ.
  9. ಸ್ಟ್ರೈಕ್‌ ಬ್ಯಾಟ್ಸ್‌ಮನ್‌ನನ್ನು ರನ್‌ಔಟ್‌ ಮಾಡುವಂತ್ತಿಲ್ಲ !: ಬೌಲರ್‌ ಚೆಂಡನ್ನು ಎಸೆಯುವ ಸಲುವಾಗಿ ಕ್ರೀಸ್‌ಗೆ ಬರುವ ಮೊದಲೇ ಸ್ಟ್ರೈಕ್‌ ಬ್ಯಾಟರ್‌ ತನ್ನ ಕ್ರೀಸ್‌ನಿಂದ ಮುಂದೆ ಬಂದು ನಿಂತಿದ್ದರೆ, ಬೌಲರ್‌ ಸ್ಟ್ರೈಕ್‌ ಕಡೆಗಿನ ಸ್ಟಂಪ್ಸ್‌ಗೆ ಚೆಂಡನ್ನು ಎಸೆದು ರನ್‌ಔಟ್‌ ಮಾಡುವ ಅವಕಾಶವಿತ್ತು. ಈ ನಿಯಮವನ್ನು ಇದೀಗ ಕೈಬಿಡಲಾಗಿದೆ.

10: ಪಿಚ್‌ನ ಹೊರಭಾಗದಲ್ಲಿ ಬೌಲ್‌ ಮಾಡಿದರೆ ನೋ ಬಾಲ್‌: ಬ್ಯಾಟರ್‌ನ ಪಿಚ್‌ ಆಚೆಗೆ ಬಂದು ಚೆಂಡನ್ನು ಹೊಡೆಯುವಂತೆ ಬೌಲಿಂಗ್‌ ಮಾಡಿದ್ದರೆ, ಅದನ್ನು ನೋ-ಬಾಲ್‌ ಎಂದು ಪರಿಗಣಿಸಲಾಗುತ್ತದೆ.



Join Whatsapp