ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಸಾವು: ಪಕ್ಕದ ಮನೆಯವರಿಂದಲೇ ಕೊಲೆ ಶಂಕೆ

Prasthutha|


ಮೈಸೂರು: ಕೇಂದ್ರ ಗುಪ್ತಚರ ಇಲಾಖೆ( ಇಂಟೆಲಿಜೆನ್ಸ್ ಬ್ಯೂರೋ) ನಿವೃತ್ತ ಅಧಿಕಾರಿ ಆರ್.ಎಸ್. ಕುಲಕರ್ಣಿ ಅವರ ಅನುಮಾನಾಸ್ಪದ ಸಾವಿನ ಕುರಿತು ಮಹತ್ವದ ಸುಳಿವೊಂದು ಸಿಕ್ಕಿದೆ.

- Advertisement -


ಪಕ್ಕದ ಮನೆಯವರಿಂದಲೇ ಕೊಲೆ ಆಗಿದೆ ಎಂಬ ಶಂಕೆಯ ಮೇರೆಗೆ ಅವರ ವಿರುದ್ಧ ದೂರು ಕೂಡ ನೀಡಲಾಗಿದೆ.
ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್​​ ನಲ್ಲಿ ಕಳೆದ ನ.4 ಸಂಜೆ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಆರ್.ಎನ್. ಕುಲಕರ್ಣಿ(84) ಅವರಿಗೆ ನಂಬರ್ ಪ್ಲೇಟ್​ ಇರದ ಕಾರೊಂದು ಡಿಕ್ಕಿ ಹೊಡೆದುಕೊಂಡು ಹೋಗಿದೆ. ಪರಿಣಾಮವಾಗಿ ಅವರು ಸಾವಿಗೀಡಾಗಿದ್ದರು. ಇದು ಕೊಲೆಯೋ, ಅಪಘಾತವೋ ಎಂಬ ಅನುಮಾನ ಉಂಟಾಗಿದ್ದು, ಇದೀಗ ಕೊಲೆಯೇ ಎಂಬ ಆರೋಪವೊಂದು ಕೇಳಿಬಂದಿದೆ.


ಟಿ.ಕೆ. ಲೇಔಟ್​ನ ಲ್ಲಿ ವಾಸವಾಗಿದ್ದ ಕುಲಕರ್ಣಿ ಅವರ ನಿವಾಸಕ್ಕೆ ಹೊಂದಿಕೊಂಡಂತೆ ಮಾದಪ್ಪ ಎಂಬವರು ಮನೆ ನಿರ್ಮಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಪಕ್ಕದ ಮನೆಯವರ ವಿರುದ್ಧ ದೂರು ನೀಡಿದ್ದರು. ನ್ಯಾಯಾಲಯದಲ್ಲೂ ಕೇಸ್ ದಾಖಲಿಸಿ ಮನೆ ನಿರ್ಮಿಸದಂತೆ ತಡೆಯಾಜ್ಞೆ ತಂದಿದ್ದರು.

- Advertisement -


ಈ ಹಿನ್ನೆಲೆಯಲ್ಲಿ ಗಲಾಟೆಯಾಗಿದ್ದು, ಬಳಿಕ ಮಾದಪ್ಪ ಮತ್ತಾತನ ಮಕ್ಕಳು ಕೊಲೆ ಬೆದರಿಕೆ ಹಾಕಿದ್ದರು. ಹೀಗಾಗಿ ಅವರೇ ಕೊಲೆ ಮಾಡಿಸಿರಬಹುದು ಎಂಬ ಶಂಕೆಯನ್ನು ಕುಲಕರ್ಣಿ ಅವರ ಅಳಿಯ, ಅಮೆರಿಕ ನಿವಾಸಿ ಸಂಜಯ್ ಅಂಗಡಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಜಯಲಕ್ಷ್ಮೀಪುರಂ ಪೊಲೀಸರು ಎಲ್ಲಾ ಅಯಾಮಗಳಲ್ಲಿ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.

Join Whatsapp