ನವದೆಹಲಿ: ಪಾಕ್ ಮೂಲದ ಏಜೆಂಟ್ ಮಾಡಿದ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಸೇನೆಗೆ ಸಂಬಂಧಿಸಿದ ರಹಸ್ಯ ಮತ್ತು ಸೂಕ್ಷ್ಮವಾದ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇರೆಗೆ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆರೋಪಿಯು 32 ವರ್ಷದ ದೇವೆಂದರ್ ನಾರಾಯಣ ಶರ್ಮಾ ಎಂದು ಗುರುತಿಸಲಾಗಿದ್ದು, ಇಲ್ಲಿನ ಸುಬ್ರೋತೊ ಪಾರ್ಕ್ ನಲ್ಲಿರುವ ಐಎಎಫ್ ರೆಕಾರ್ಡ್ ಆಫೀಸ್ ನಲ್ಲಿ ಆಡಳಿತ ಸಹಾಯಕರಾಗಿ (ಜಿಡಿ) ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮಾ ಅಪರಿಚಿತರ ಹನಿ ಟ್ರ್ಯಾಪಿಗೆ ಬಿದ್ದಿದ್ದು ಅವರು ಆತನಿಂದ ಸೇನೆಯ ಸೂಕ್ಷ್ಮ ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಹಿಂದೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ- ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಕೈವಾಡ ಇದೆಯೆಂದು ಹಿರಿಯ ಪೋಲೀಸು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಯು ಸೇನೆಯ ದಿಲ್ಲಿಯ ಸುಬ್ರತೋ ಪಾರ್ಕಿನಲ್ಲಿರುವ ದಾಖಲೆಗಳ ಕಚೇರಿಯಲ್ಲಿ ಶರ್ಮಾ ಕೆಲಸ ಮಾಡುತ್ತಿದ್ದ.
“ಕಂಪ್ಯೂಟರುಗಳಿಂದ ಐಎಎಫ್ ಮಾಹಿತಿಗಳನ್ನು ಕದ್ದು ರಕ್ಷಣಾ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾನೆ ಎಂದು ವಾಯುಪಡೆಯವರು ಶರ್ಮಾ ವಿರುದ್ಧ ದೂರು ಕೊಟ್ಟಿದ್ದರು. ಆತನು ಪರ ದೇಶವೊಂದಕ್ಕೆ ಮಾಹಿತಿ ಸೋರಿಕೆ ಮಾಡಿದ್ದಾನೆ ಮತ್ತು ಅದಕ್ಕೆ ಹಣವನ್ನೂ ಪಡೆದಿದ್ದಾನೆ” ಎಂದು ದೂರಿರುವುದಾಗಿ ಪೊಲೀಸ್ ಹೇಳಿಕೆ ನೀಡಿದ್ದಾರೆ.
ಅಧಿಕೃತ ರಹಸ್ಯ ಕಾಯ್ದೆಯಡಿಯಲ್ಲಿ ಶರ್ಮಾ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಫೇಸ್ ಬುಕ್ ನಲ್ಲಿ ಪರಿಚಿತಳಾದ ಮಹಿಳೆಯೊಬ್ಬಳನ್ನು ನೋಡಲು ಹೊರಟಿದ್ದ ಶರ್ಮಾನನ್ನು ದಿಲ್ಲಿಯ ದಾವುಲಾಕಾವುನ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಆ ಮಹಿಳೆಯು ಶರ್ಮಾನ ಗೆಳೆತನ ಬೆಳೆಸಿಕೊಂಡು, ಆಗಾಗ ಕರೆ ಮಾಡುತ್ತಿದ್ದಳು ಮತ್ತು ಐಎಎಫ್ ನ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಳು ಎಂಬುದನ್ನೂ ಪೊಲೀಸ್ ವರದಿ ಹೇಳಿದೆ.
“ನಾವು ಶರ್ಮಾನ ಪತ್ನಿಯ ಬ್ಯಾಂಕು ವಹಿವಾಟುಗಳನ್ನು ಗಮನಿಸಿದ್ದು ಅದರಲ್ಲಿ ಅನುಮಾನಾಸ್ಪದ ಹಣ ಚಲಾವಣೆಗಳು ಕಂಡು ಬಂದಿವೆ” ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಕಾನ್ಪುರ ಮೂಲದ ಶರ್ಮಾ ಮಾಹಿತಿ ಸೋರಿಕೆ ಮಾಡಿರುವುದು ತಿಳಿದು ಬಂದಿದೆ. ಮೇ 6ರ ಇನ್ಪುಟ್ ಸಹಿತ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.