ಫುಟ್ಪಾತ್ ಗೆ ಬಿದ್ದು ಗಾಯಗೊಂಡ ಗಾಯಕ | ನೀರು ನಿಂತ ರಸ್ತೆಯಲ್ಲಿ ಈಜಾಡದೆ ನಡೆದದ್ದೇ ನನ್ನ ತಪ್ಪು ಎಂದ ಅಜಯ್ ವಾರಿಯರ್

Prasthutha|

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಾಯಕ ಅಜಯ್ ವಾರಿಯರ್ ಫುಟ್ಪಾತಿಗೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಮಳೆ ಬೀಳುತ್ತಿದ್ದ ವೇಳೆ ಪುಟ್ ಪಾತ್‌ನಲ್ಲಿ ತೆರೆದ ಗುಂಡಿಗೆ ಬಿದ್ದು ಗಾಯಕ ಅಜಯ್ ವಾರಿಯರ್ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡು ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಬಿಬಿಎಂಪಿ ಅಧಿಕಾರಿಗಳನ್ನೇ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹೈಕೋರ್ಟ್  ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಇನ್ನೂ ಎಚ್ಚರವಾಗಿಲ್ಲ.ಇದೀಗ ಗಾಯಕ ಅಜಯ್ ವಾರಿಯರ್ ಪುಟ್ ಪಾತ್ ಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದು  ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಬಗ್ಗೆ ಫೇಸ್ ಬುಕ್ ಮೂಲಕ ಹಂಚಿಕೊಂಡ ಅಜಯ್ ವಾರಿಯರ್ “ ಬೆಂಗಳೂರಿನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿಯುತ್ತಿದ್ದು  ಕೇರಳಕ್ಕೆ ತೆರಳಬೇಕಿದ್ದ ನಾನು ರೈಲ್ವೇ ನಿಲ್ದಾಣದ ಕಡೆಗೆ ಹೊರಟಿದ್ದೆ. ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡಲು ಪ್ಲಾನ್ ಮಾಡಿಕೊಂಡಿದ್ದೆ.

- Advertisement -

ಓಲಾ ಉಬರ್ ಬಕ್ ಮಾಡಲು ಯತ್ನಿಸಿ ವಿಫಲವಾದ ಕಾರಣ ನಡೆದು ಹೋಗಲು ನಿರ್ಧರಿಸಿ ಫುಟ್ ಪಾತ್ ಮೂಲಕ ನಡೆದುಕೊಂಡು ಹೊದಾಗ ಫುಟ್ ಪಾತ್ ಗುಂಡಿ ಮುಚ್ಚದ ಕಾರಣ ನನ್ನ ಕಾಲಿಗೆ ಗಾಯವಾಗಿದ್ದು ಅನೇಕ ಕಾರ್ಯಕ್ರಮಗಳನ್ನು ಕೈ ಬಿಡುವಂತಾಗಿದೆ. ಇದಕ್ಕೆಲ್ಲಾ ಯಾರನ್ನು ದೂಷಣೆ ಮಾಡಬೇಕು? ನನ್ನನ್ನೇ…?! ನಾನು ಪುಟ್ ಪಾತ್ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಬದಲಿಗೆ ಮಳೆ ನೀರು ನಿಂತಿದ್ದ ರಸ್ತೆಯಲ್ಲಿ ಈಜಾಡಿಕೊಂಡು ಹೋಗಬೇಕಿತ್ತು. ಜನರನ್ನು ಎಚ್ಚರಿಸುವ ಕಾರಣಕ್ಕೆ ಈ ಸಂದೇಶ ನೀಡುತ್ತಿದ್ದೇನೆ ಎಂದಿದ್ದಾರೆ.

Join Whatsapp