ಸೈನಿಕ ಮಾಡಬೇಕು ಅಂತ ಇದ್ದೆ, ಮಗನಿಗೆ ಕಠಿಣ ಶಿಕ್ಷೆ ಆಗಲೇಬೇಕು: ಆರೊಪಿಯ ತಂದೆ ಕಣ್ಣೀರು

Prasthutha|

ಬೆಳಗಾವಿ: ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ ಪುತ್ರಿ ನೇಹಾ ಹಿರೇಮಠ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಫಯಾಜ್ ತಂದೆ ಬಾಬಾಸಾಹೇಬ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ಕರ್ನಾಟಕ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ಮಗ ತಪ್ಪು ಮಾಡಿದ್ದಾನೆ. ನನ್ನ ಗ್ರಾಮವಾದ ಮುನವಳ್ಳಿಯ ಜನತೆ ನನ್ನನ್ನು ಕ್ಷಮಿಸಬೇಕು. ನನ್ನ ಮಗನಿಂದ ಮುನವಳ್ಳಿಗೆ ಕೆಟ್ಟ ಹೆಸರು ಬಂದಿದೆ. ಕಾನೂನಿನ ಪ್ರಕಾರ ನನ್ನ ಮಗನಿಗೆ ಕಠಿಣ ಶಿಕ್ಷೆ ಆಗಲಿ ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾರೆ.

- Advertisement -

ಯಾರು ಹೆಣ್ಣುಮಕ್ಕಳ್ಮೇಲೆ ಕಣ್ಣು ಹಾಕಬಾರದು. ಅಂತಹ ಶಿಕ್ಷೆಯನ್ನು ಮಗನಿಗೆ ಕೊಡಬೇಕು ಎಂದು ಬಾಬಾಸಾಹೇಬ್ ಕಣ್ಣೀರು ಹಾಕಿದ್ದಾರೆ.

ಆತ ಮಾಡಿರುವ ತಪ್ಪಿಗೆ ಕಠಿಣ ಶಿಕ್ಷೆ ನೀಡಬೇಕು. ಹತ್ಯೆಯಾದ ನೇಹಾ ಅವರ ತಂದೆ ತಾಯಿಯಲ್ಲಿ ಕ್ಷಮೆ ಕೇಳುತ್ತೇನೆ. ಅವಳು ಸಹ ನನ್ನ ಮಗಳು. ಅವನನ್ನು ಸೈನಿಕ ಮಾಡಬೇಕು ಎಂದು ಬಾಡಿ ಬಿಲ್ಡ್ ಮಾಡೋಕೆ ಹೇಳಿದ್ದೆ. ಈಗ ಇಂಹತ ಹೀನ ಕೃತ್ಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

- Advertisement -

ಹೆಣ್ಣು ಮಕ್ಕಳನ್ನು ಪೂಜಿಸುವ ದೇಶದಲ್ಲಿ ನಾವಿದ್ದೇವೆ. ಹೆಣ್ಣು ಮಕ್ಕಳನ್ನು ದೇವರು ಎಂದು ಭಾವಿಸುವ ದೇಶ ನಮ್ಮದು. ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ. ಮುನವಳ್ಳಿ ಜನರು ಶಾಂತಿಯನ್ನು ಕಾಪಾಡಬೇಕೆಂದು ಕಣ್ಣೀರು ಹಾಕುತ್ತಾ ಬಾಬಾಸಾಹೇಬ್ ಜನರಲ್ಲಿ ಮನವಿ ಮಾಡಿಕೊಂಡರು.



Join Whatsapp