ನಾನು ನನ್ನ ಮನೆಯನ್ನು ಬಿಡುವ ಅನಿವಾರ್ಯತೆ ಸೃಷ್ಟಿಸಲಾಯಿತು: ಗುಲಾಂ ನಬಿ ಆಜಾದ್

Prasthutha|

ನವದೆಹಲಿ: ನಾನು ನನ್ನ ಮನೆಯನ್ನು ಬಿಡುವ ಅನಿವಾರ್ಯತೆ ಸೃಷ್ಟಿಸಲಾಯಿತು ಎಂದು ಕಾಂಗ್ರೆಸ್ ತೊರೆದಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.

- Advertisement -

ಕಾಂಗ್ರೆಸ್ಸಿನ ಭಾರತ್ ಜೋಡೋ ಯಾತ್ರೆ ಮತ್ತು ಪಕ್ಷದ ಸಂಘಟನಾ ಚುನಾವಣೆ ಘೋಷಣೆಗೂ ಅಲ್ಪ ಮೊದಲು   ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

 73 ವರ್ಷ ಪ್ರಾಯದ ಆಜಾದ್ ಅವರು ಪಕ್ಷದ ಅಧ್ಯಕ್ಷೆ ಸದ್ಯ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿಯವರಿಗೆ 5 ಪುಟಗಳ ಪತ್ರ ಬರೆದಿದ್ದು, ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಚುನಾವಣೆಯು ನೆಪಕ್ಕಷ್ಟೆ ನಡೆಯುವ ನಾಟಕ ಎಂದು ಹೇಳಿದ್ದಾರೆ.

- Advertisement -

“ಮೋದಿಯವರ ವಿಚಾರ ಬೇರೆಯದು. ಜಿ23 ಪತ್ರ ಬರೆದಾಗಿನಿಂದಲೂ ಅವರು ನನ್ನ ಜೊತೆಗೆ ಅವರು ಒಂದು ವಿಷಮ ವಿಚಾರ ನಡೆಸುತ್ತಲೇ ಬಂದಿದ್ದಾರೆ. ಅವರನ್ನು ಯಾರೂ ಪ್ರಶ್ನಿಸಬಾರದು, ಅವರಿಗೆ ಯಾರೂ ಪತ್ರ ಬರೆಯಬಾರದು. ಹಲವಾರು ಕಾಂಗ್ರೆಸ್ ಸಭೆಗಳು ನಡೆದವು. ಆದರೆ ಒಂದೇ ಒಂದು ಸಲಹೆ ಕೂಡ ಸ್ವೀಕರಿಸಲಾಗಿಲ್ಲ.” ಎಂದು ಆಜಾದ್  ಅವರು ಪತ್ರಕರ್ತರ ಜೊತೆಗೆ ಮಾತನಾಡುತ್ತ ಹೇಳಿದರು.

“ನಾನು ನನ್ನ ಮನೆ ಬಿಡಬೇಕಾದ ಬಲವಂತಕ್ಕೆ ಬಿದ್ದೆ” ಎಂದೂ ಆಜಾದ್ ತಿಳಿಸಿದ್ದಾರೆ.

ಪಕ್ಷದೊಳಗೆ ಭಿನ್ನಮತ ತೋರಿದ ಜಿ23 ಗುಂಪಿನ ಸದಸ್ಯರಲ್ಲಿ ಒಬ್ಬರಾಗಿದ್ದಾರೆ ಗುಲಾಂ ನಬಿ ಆಜಾದ್. ಅವರೆಲ್ಲ ಬಹುತೇಕ ತಮ್ಮ ಜೀವಮಾನವನ್ನು ತೇಯ್ದ ಕಾಂಗ್ರೆಸ್ ತೆಕ್ಕೆಯಿಂದ ಹೊರಕ್ಕೆ ಬಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನದೇ ಹೊಸ ಪಕ್ಷ ಸ್ಥಾಪಿಸುವುದಾಗಿ ಹೇಳಿರುವ ಆಜಾದ್, ಇತರ ಐವರು ಕೂಡ ಇಲ್ಲಿ ಪಕ್ಷ ತೊರೆದು ನಮ್ಮ ಜೊತೆಗೆ ಸೇರಿಕೊಳ್ಳುವರು ಎಂದು ಹೇಳಿದರು.

Join Whatsapp