ಬಾಲ್ಯದಲ್ಲಿ ನಾನೂ NCC ಕೆಡೆಟ್ ಆಗಿದ್ದೆ : ಪ್ರಧಾನಿ ನರೇಂದ್ರ ಮೋದಿ

Prasthutha|

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ನವದೆಹಲಿಯ ಕರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(NCC) ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಯುವ ಕೆಡೆಟ್ʼಗಳ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಒಂದು ಕಾಲದಲ್ಲಿ ನಾನು ಕೂಡ ನಿಮ್ಮಂತೆ ಎನ್‌ಸಿಸಿ ಕೆಡೆಟ್ ಆಗಿದ್ದೆ ಎಂದರು.

- Advertisement -

ಕೆಡೆಟ್ʼಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಇಂದು ದೇಶವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯುತ್ತಿರುವಾಗ, ದೇಶದಲ್ಲಿ ಎನ್‌ಸಿಸಿಯನ್ನು ಬಲಪಡಿಸುವುದು ನಮ್ಮ ಪ್ರಯತ್ನವಾಗಿದೆ. ಇದಕ್ಕಾಗಿ ಉನ್ನತ ಮಟ್ಟದ ಪರಿಶೀಲನಾ ಸಮಿತಿ ಸ್ಥಾಪಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ, ದೇಶದ ಗಡಿ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ಕೆಡೆಟ್ʼಗಳನ್ನ ಸೇರಿಸಲಾಗಿದೆ’ ಎಂದರು.

‘ನಾವೆಲ್ಲರೂ ಭಾರತದ ಬೇರುಗಳೊಂದಿಗೆ ಸಂಪರ್ಕ ಸಾಧಿಸಬೇಕಾಗಿದೆ’ ಎಂದು ಪ್ರಧಾನಿ ಮೋದಿ ಯುವಕರಿಗೆ ಮನವಿ ಮಾಡಿದರು. ನಿಮ್ಮ ದೃಢ ನಿರ್ಧಾರ ಮತ್ತು ಬೆಂಬಲದಿಂದ ನಾವು ಭಾರತದ ಭವಿಷ್ಯವನ್ನ ಬದಲಾಯಿಸಬಹುದು. ಮಾದಕ ವ್ಯಸನವು ಯುವಕರ ಜೀವನವನ್ನ ನಾಶಪಡಿಸುತ್ತದೆ, ನಾವು ಇದರ ವಿರುದ್ಧ ಹೋರಾಡಬೇಕಾಗಿದೆ’ ಎಂದ್ದಿದ್ದಾರೆ.

Join Whatsapp