ಮಹಿಳೆಯರ ನಗ್ನತೆಯನ್ನು ರಹಸ್ಯವಾಗಿ ಸೆರೆ ಹಿಡಿಯುವ ಪತಿ ವಿರುದ್ಧ ಪತ್ನಿ ದೂರು

Prasthutha|

- Advertisement -

ಚೆನ್ನೈ: ಮಹಿಳೆಯರ ನಗ್ನತೆಯನ್ನು ಸೆರೆ ಹಿಡಿಯುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಚೆನ್ನೈನ ವಾಷರ್‌ಮೆನ್‌ ಪೇಟೆ ನಿವಾಸಿ ಜಿ ಶಂಕರ್ (30) ನನ್ನು ತಿರುವಾಟ್ಟಿಯೂರು ಮಹಿಳಾ ಪೊಲೀಸರು ವಶಕ್ಕೆ ಪಡೆದಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ತಾನು ಬಳಿಗೆ ಹೋದಾಗಲೆಲ್ಲ ಮೊಬೈಲ್ ಆಫ್ ಮಾಡುತ್ತಿದ್ದರಿಂದ ಅನುಮಾನಗೊಂಡ ಪತ್ನಿ, ಮೊಬೈಲ್ ಫೋನ್ ಪರಿಶೀಲಿಸಿದಾಗ ಆರೋಪಿಯು ಪತ್ನಿಯ ಸಹೋದರಿ ಸೇರಿದಂತೆ ಮಹಿಳೆಯರು ಬಟ್ಟೆ ಬದಲಿಸುವ ಹಾಗೂ ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ದಾಖಲಿಸಿರುವುದು ಪತ್ತೆಯಾಗಿತ್ತು.

Join Whatsapp