ಮಧುರೈ: ನನಗೊಂದು ‘ ವಧುಬೇಕು’ ಎಂದು ಬೀದಿಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸುವ ಮೂಲಕ ಯುವಕನೊಬ್ಬ ನಗರದಲ್ಲಿ ಸಂಚಲನ ಮೂಡಿಸಿದ್ದಾನೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಲ್ಲಾಪುರಂನ 27 ವರ್ಷದ ಎಂ.ಎಸ್ ಜಗನ್ ಪರಿಪೂರ್ಣ ಸಂಗಾತಿಗಾಗಿ ಪಟ್ಟಣದಾದ್ಯಂತ ಪೋಸ್ಟರ್ ಗಳನ್ನು ಹಾಕಿದ್ದಾನೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಗನ್, ನಾನು ಮ್ಯಾನೇಜರ್ ಅಷ್ಟೇ ಅಲ್ಲ ಪಾರ್ಟ್ ಟೈಮ್ ಡಿಸೈನರ್ ಕೂಡ ಆಗಿದ್ದೇನೆ. ಡಿಸೈನರ್ ಆಗಿ ಕೆಲಸ ಮಾಡುವಾಗಲೇ ನನಗೆ ಈ ಹೊಸ ಕಲ್ಪನೆ ಮೂಡಿತು. ಕಳೆದ ಐದು ವರ್ಷಗಳಿಂದ ನಾನು ವಧುವನ್ನು ಹುಡುಕುತ್ತಿದ್ದೇನೆ. ಆದರೆ, ಯಶಸ್ವಿಯಾಗಲಿಲ್ಲ. ಇದಕ್ಕಾಗಿ ನಾನುಪಟ್ಟಣದಾದ್ಯಂತ ಪೋಸ್ಟರ್ ಗಳನ್ನು ಹಾಕಿದ್ದಾನೆ ಎಂದು ಹೇಳಿದರು.