ನವದೆಹಲಿ: ಪ್ರಧಾನಿ ಮೋದಿಯನ್ನು ಅಹಮದಾಬಾದ್’ನಲ್ಲಿ ಯಾವತ್ತೂ ಭೇಟಿ ನಡೆಸಿಯೂ ಇಲ್ಲ, ಯಾವುದೇ ನೆರವುಯಾಚಿಸಿಲ್ಲ ಎಂದು ಆಪ್ತ ಗೆಳೆಯ ಅಬ್ಬಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ತಾಯಿಯ ನೂರನೇ ಹುಟ್ಟುಹಬ್ಬದ ವೇಳೆ ಬ್ಲಾಗ್’ವೊಂದರಲ್ಲಿಪ್ರಧಾನಿ ಮೋದಿ, ತನ್ನ ಬಾಲ್ಯದ ಅಪ್ತ ಗೆಳಯ ಅಬ್ಬಾಸ್ ಕುರಿತು ಪ್ರಸ್ತಾಪಿಸಿದ್ದರು. ಇದರಲ್ಲಿ ಅಬ್ಬಾಸ್’ನನ್ನು ಮನೆಗೆ ಕರೆದುಕೊಂಡು ಬಂದು ಶಿಕ್ಷಣ ಪೂರ್ತಿಗೊಳಿಸಿದ ಮತ್ತು ಈದ್ ಹಬ್ಬದ ಸಂದರ್ಭದಲ್ಲಿ ತಾಯಿ ತಯಾರಿಸಿ ಹಂಚಿದ ವಿಶಿಷ್ಟ ತಿನಿಸುಗಳನ್ನು ಜೊತೆಯಾಗಿ ಸೇವಿಸಿದ್ದನ್ನು ನೆನಪಿಸಿದ್ದರು. ಬಳಿಕ ಅಬ್ಬಾಸ್ ಕುರಿತು ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಸದ್ಯ ಅಬ್ಬಾಸ್ ಅಲಿ ದೂರದ ಸಿಡ್ನಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿ ಅವರ ಮನೆಯಲ್ಲಿ ನಾನು ಒಂದು ವರ್ಷವನ್ನು ಕಳೆದಿದ್ದು, ಅಲ್ಲಿಯೇ ಮ್ಯಾಟ್ರಿಕ್ಯುಲೇಶನ್ ಪೂರ್ತಿಗೊಳಿಸಿರುವುದಾಗಿ ಸುದ್ದಿಸಂಸ್ಥೆಗೆ ಅಬ್ಬಾಸ್ ತಿಳಿಸಿದ್ದಾರೆ.
ತಮ್ಮ ತಂದೆ ಮತ್ತು ಮೋದಿ ಅವರ ತಂದೆ ಸ್ನೇಹಿತರಾಗಿದ್ದು, ನನ್ನ ತಂದೆ ತೀರಿಹೋದ ಬಳಿಕ ಅವರ ಮನೆಯಲ್ಲಿ ಒಂದು ವರ್ಷವನ್ನು ಕಳೆದಿದ್ದೆ. ಈ ವೇಳೆ ಹೋಳಿ, ದೀಪಾವಳಿ, ಈದ್ ಒಟ್ಟಿಗೆ ಆಚರಿಸುತ್ತಿದ್ದೆವು ಎಂದ ಅಬ್ಬಾಸ್, ಇದೀಗ ಅಂತಹ ವಾತಾವರಣ ಮಾಯವಾಗಿದೆ ಎಂದು ಅವರು ಕೊರಗು ವಿಷಾಧಿಸಿದ್ದಾರೆ.