ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ಶಾರ್ಫ್ ಶೂಟರ್’ಗಳ ಬಂಧನ

Prasthutha|

ಚಂಡೀಗಢ: ಖ್ಯಾತ ಪಂಜಾಬ್ ಗಾಯಕ ಸಿಧು ಮೂಲೆವಾಲಾ ಅವರ ಹತ್ಯೆಗೆ ಸಂಬಂಧಿಸಿದಂತೆ ಬಂಧನಕಾರ್ಯ ಮುಂದುವರೆದಿದ್ದು, ಇಬ್ಬರು ಪ್ರಮುಖ ಶಾರ್ಫ್ ಶೂಟರ್ ಮತ್ತು ಸಹಾಯಕನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ತಂಡ ಸೋಮವಾರ ಬಂಧಿಸಿದೆ.

- Advertisement -

ಇಬ್ಬರು ಶಾರ್ಫ್ ಶೂಟರ್’ಗಳ ಪೈಕಿ ಒಬ್ಬರು ತಂಡದ ಮುಖಸ್ಥನಾಗಿದ್ದಾನೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತರನ್ನು ಹರ್ಯಾಣದ ಸೋನಿಪತ್ ನಿವಾಸಿ ಪ್ರಿಯವ್ರತ್ ಅಲಿಯಾಸ್ ಫೌಜಿ ಮತ್ತು ಕಾಶಿಶ್ ಅಲಿಯಾಸ್ ಕುಲದೀಪ್ ಎಂದು ಗುರುತಿಸಲಾಗಿದೆ.

ಗ್ಯಾಂಗ್’ಸ್ಟರ್ ತಂಡದ ಮುಖ್ಯಸ್ಥರಾಗಿರುವ ಪ್ರಿಯವ್ರತ್ ಶೂಟರ್ ತಂಡವನ್ನು ಮುನ್ನಡಿಸಿದ್ದು, ಘಟನೆಯ ವೇಳೆ ಗೋಲ್ಡಿ ಬ್ರಾರ್ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದನು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಪ್ರಿಯವ್ರತ್ ಸಿಧು ಮೂಸೆವಾಲಾ ಅವರ ಹತ್ಯೆಯ ಪ್ರಮುಖ ಶೂಟರ್ ಮತ್ತು ಕೊಲೆಗೆ ಸಂಚು ರೂಪಿಸಿದ ಪ್ರಮುಖನಾಗಿದ್ದಾನೆ. ಈ ಕುರಿತ ದೃಶ್ಯಾವಳಿ ಫತೇಘರ್ ಪೆಟ್ರೋಲ್ ಪಂಪ್ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Join Whatsapp