ಗೋಮಾಂಸ ರಫ್ತಿನಲ್ಲಿ ದೇಶವನ್ನು 2 ಸ್ಥಾನಕ್ಕೆ ಏರಿಸಿರುವ ಬಿಜೆಪಿಗರ ಗೋವಿನ ಪ್ರೀತಿಯನ್ನು ಕಂಡರೆ ನಗಬೇಕೋ ಅಳಬೇಕೋ ಎಂದು ತಿಳಿಯುತ್ತಿಲ್ಲ: ಡಾ.ಎಚ್.ಸಿ.ಮಹದೇವಪ್ಪ

Prasthutha|

ಬೆಂಗಳೂರು: ಗೋವುಗಳ ಆಹಾರಕ್ಕೆ ಬೇಕಾದ ಗೋಮಾಳಗಳನ್ನು ಅಕ್ರಮವಾಗಿ ಲಪಟಾಯಿಸಿ, ಗೋಮಾಂಸ ರಫ್ತಿನಲ್ಲಿ ದೇಶವನ್ನು 2 ಸ್ಥಾನಕ್ಕೆ ಏರಿಸಿರುವ ಬಿಜೆಪಿಗರ ಗೋವಿನ ಪ್ರೀತಿಯನ್ನು ಕಂಡರೆ ನಗಬೇಕೋ ಅಳಬೇಕೋ ಎಂದು ತಿಳಿಯುತ್ತಿಲ್ಲ. ಬಿಜೆಪಿಗರೇ ನಿಮ್ಮ ಗೋವಿನ ವೇಷದ ನಾಟಕ ಆ ಮೂಕ ಪ್ರಾಣಿಗಳಿಗೂ ಅರಿವಾಗಿದೆ. Cow Hug Day ಅಂತ ಹೋಗಿ ಸುಮ್ಮನೇ ಯಾಕೆ ಒದೆಸಿಕೊಳ್ಳುವಿರಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.

- Advertisement -


ಟ್ವೀಟ್ ಮಾಡಿರುವ ಅವರು, ಇರೋ ಬರೋ ಗೋಮಾಳಗಳನ್ನೆಲ್ಲಾ ಆಕ್ರಮಿಸಿ RSS ಸಂಸ್ಥೆಗಳಿಗೆ ಕೊಡುತ್ತಿರುವ ಬಿಜೆಪಿ ಪಕ್ಷದವರು Cow Hug Day ಅಂತ ಮಾಡಿ ತಮ್ಮ ಭೂ ಹಗರಣಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ಅವರ ಒಂದೇ ಒಂದು ಗಂಟೆಯ ಬಹಿರಂಗ ಚರ್ಚೆಯನ್ನು ಏರ್ಪಡಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಎಂತಹ ಅಸಮರ್ಥರು ಮತ್ತು ಎಷ್ಟರ ಮಟ್ಟಿಗೆ ಸುಳ್ಳನ್ನು ಆಶ್ರಯಿಸಿದ್ದಾರೆ ಎಂಬುದು ದೇಶಕ್ಕೇ ತಿಳಿಯಲಿದೆ CM ಬೊಮ್ಮಾಯಿ ಹೇಳುವ ಹಾಗೆ ಧಮ್ಮಿದ್ರೆ ತಾಕತ್ತಿದ್ರೆ ಬಿಜೆಪಿಗರು ಈ ಬಹಿರಂಗ ಚರ್ಚೆಯನ್ನು ಏರ್ಪಡಿಸಲಿ! ಎಂದು ಸವಾಲು ಹಾಕಿದ್ದಾರೆ.


ಸುಳ್ಳಿಗೆ ಮತ್ತೊಂದು ಹೆಸರೇ ಪ್ರಧಾನಿ ಎಂದು ಎಲ್ಲರಿಗೂ ಗೊತ್ತಿದೆ. ಇನ್ನು ತೈಲ ಬೆಲೆ 102, ಅಡುಗೆ ಅನಿಲದ ಬೆಲೆ 1150, ಅಡುಗೆ ಎಣ್ಣೆಯ ಬೆಲೆ 180 ರೂಪಾಯಿ ಇರುವಾಗ ಮೋದಿ ಅವರು ಗುಡುಗಿದರೂ ಅಷ್ಟೇ ನಡುಗಿದರೂ ಅಷ್ಟೇ, ಇವರದ್ದು ದೇಶದ ಇತಿಹಾಸದಲ್ಲೇ ಅತಿಕೆಟ್ಟ ಆಡಳಿತ ಎಂಬುದು ಅಕ್ಷರಶಃ ಸತ್ಯ ಎಂದು ಮಹದೇವಪ್ಪ ಟೀಕಿಸಿದ್ದಾರೆ.



Join Whatsapp