“ಕೊಕೇನ್ ಅನ್ನು ಒಳಹಾಕಲು ನಾನು ಕೋಕಾ ಕೋಲಾ ಖರೀದಿಸುತ್ತೇನೆ” : ಟ್ವಿಟರ್ ಖರೀದಿ ಬಳಿಕ ಹಲವರ ಹುಬ್ಬೇರಿಸಿದ ಎಲೋನ್ ಮಸ್ಕ್ ಮತ್ತೊಂದು ಟ್ವೀಟ್

Prasthutha|

ವಿಶ್ವದ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾದ ಟ್ವಿಟರನ್ನು 44 ಬಿಲಿಯನ್ ಡಾಲರ್ ಗೆ ಖರೀದಿ ಮಾಡಿದ ನಂತರ, ಬಿಲಿಯನೇರ್ ಉದ್ಯಮಿ ಹಾಗೂ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಹೊಸ ಗುರಿಯನ್ನು ಘೋಷಿಸಿದ್ದಾರೆ.

- Advertisement -

ವ್ಯಂಗ್ಯಾತ್ಮಕ ಟ್ವೀಟ್ ಗಳ ಮೂಲಕವೇ ಟ್ವಿಟ್ಟರನ್ನು ಕಾಲೆಳೆಯುತ್ತಲೇ ಆ ಸಂಸ್ಥೆಯನ್ನು ಖರೀದಿ ಮಾಡಿದ್ದರು.  ಮಸ್ಕ್ ಅವರ ಮತ್ತೊಂದು ವಿಲಕ್ಷಣ ಟ್ವೀಟ್ ನಲ್ಲಿ, “ಕೊಕೇನ್ ಅನ್ನು ಮತ್ತೆ ಒಳಗೆ ಹಾಕಲು ನಾನು ಕೋಕಾ ಕೋಲಾ ಖರೀದಿಸುತ್ತೇನೆ” ಎಂದು ಹೇಳಿದ್ದಾರೆ.

ಕೆಲ ಸಮಯದ ನಂತರ, ಮಸ್ಕ್  ಅವರು ಮತ್ತೊಂದು ಟ್ವೀಟನ್ನು ಮಾಡಿ “ಈಗ ನಾನು ಮೆಕ್ಡೊನಾಲ್ಡ್ಸ್ ಅನ್ನು ಖರೀದಿಸಲು ಮತ್ತು ಅಲ್ಲಿನ ಎಲ್ಲಾ ಐಸ್ ಕ್ರೀಮ್ ಯಂತ್ರಗಳನ್ನು ಸರಿಪಡಿಸಲು ಹೊರಟಿದ್ದೇನೆ” ಎಂದು ಬರೆಯಲಾದ ಒಂದು ಟ್ವೀಟಿನ ಸ್ಕ್ರೀನ್ ಶಾಟನ್ನು ಪೋಸ್ಟ್ ಮಾಡಿ “ಕೇಳು ನಾನು ಪವಾಡಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

- Advertisement -

ವಿಡಂಬಣಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಮಸ್ಕ್ ಅವರು ಒಂದು ಕಂಪನಿಯನ್ನು ಖರೀದಿಸುವ ಮೊದಲು ಆ ಕಂಪನಿಯ ಕುರಿತು ಹಾಸ್ಯಾಸ್ಪದವಾಗಿ ಕಾಲೆಳೆದು ಟಾಂಗ್ ಕೊಡುವುದನ್ನು ಮಾಡುತ್ತಾರೆ. ಟ್ವಿಟರ್  ಖರೀದಿಗೂ ಮೊದಲು “ಅವಾಸ್ತವಿಕ ಬಂಡವಾಳ ಗಳಿಕೆಗಾಗಿ ನನ್ನ ಟೆಸ್ಲಾ ಸ್ಟಾಕ್ ನ 10% ಅನ್ನು ಮಾರಾಟ ಮಾಡಬೇಕೇ” ಎಂದು ಮಸ್ಕ್ ಈ ಹಿಂದೆ ಟ್ವಿಟರ್ ಬಳಕೆದಾರರನ್ನು ಕೇಳಿದ್ದರು. ನಂತರ ಅವರು ಟೆಸ್ಲಾ ಷೇರುಗಳಲ್ಲಿ ಸುಮಾರು 7 ಬಿಲಿಯನ್ ಡಾಲರ್ ಗಳನ್ನು ಮಾರಾಟ ಮಾಡಿದ್ದರು.

ಅವರ ಇತ್ತೀಚಿನ ಕೋಕಾ ಕೋಲಾ ಟ್ವೀಟ್  ಬಹುಶಃ ತಮಾಷೆಯಾಗಿ ಕಂಡು ಬಂದರೂ ಮಸ್ಕ್ ಅವರ ಯೋಜನೆ ಸದ್ಯ ಬಂಡವಾಳಶಾಹಿಗಳ ತಲೆಹುಣ್ಣಾಗುವಂತೆ ಮಾಡಿದೆ

Join Whatsapp