ಈ ದೇಶದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಮಾನ್ಯತೆಯಿದೆ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ನಮ್ಮ ದೇಶ ಅನೇಕ ಭಾಷೆಗಳ ಗೂಡಾಗಿದೆ. ಎಲ್ಲರಿಗೂ ಅವರವರದೇ ಆದ ಸ್ವಾಭಿಮಾನವಿದೆ. ನಮ್ಮ ರಾಜ್ಯದಲ್ಲೇ ಕೊಡಗಿಗೆ ಹೋದರೆ ಒಂದು, ಮಂಗಳೂರಿಗೆ ಹೋದರೆ ಇನ್ನೊಂದು ಭಾಷೆ ಇದೆ. ಹೀಗಾಗಿ ಯಾವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

- Advertisement -

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಕನ್ನಡಿಗರು, ನಮ್ಮ ಧ್ವಜವಿದೆ, ಭಾಷೆಯಿದೆ. ನಮ್ಮದೇ ಆದ ಸ್ವಾಭಿಮಾನವಿದೆ. ಐನೂರು ರೂಪಾಯಿ ನೋಟಿನಲ್ಲಿ ಎಲ್ಲ ಭಾಷೆಗಳಿವೆ. ಕನ್ನಡ, ತೆಲುಗು, ತಮಿಳು ಭಾಷೆ ಇದೆ. ದೇಶದ ಎಲ್ಲಾ ಕಡೆ ಈ ನೋಟು ಚಲಾವಣೆ ಆಗುತ್ತದೆ ಎಂದಮೇಲೆ, ಎಲ್ಲಾ ಭಾಷೆಗಳಿಗೂ ಈ ದೇಶದಲ್ಲಿ ಸಮಾನ ಮಾನ್ಯತೆಯಿದೆ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಹಿಂದಿ ರಾಷ್ಟ್ರ ಭಾಷೆ ಎಂದು ಯಾರೋ ಒಬ್ಬರು ಹೇಳಿದರೆಂದು ನಾವು ಒಪ್ಪಲು ಸಾಧ್ಯವಿಲ್ಲ. ನಮಗೆ ಕನ್ನಡ ಭಾಷೆ ಪ್ರಾಮುಖ್ಯ. ರಾಷ್ಟ್ರಮಟ್ಟದಲ್ಲಿ ಈ ವಿಚಾರ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

Join Whatsapp