ನಾನಿನ್ನು ತುಂಬಾ ಡೇಂಜರಸ್ ಎಂದ ಪಾಕಿ ಮಾಜಿ ಪ್ರಧಾನಿ ಇಮ್ರಾನ್ ಖಾನ್

Prasthutha|

ಕರಾಚಿ: ಪಾಕಿಸ್ಥಾನದಲ್ಲಿ ನ್ಯಾಯಾಂಗವು ಸ್ವತಂತ್ರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ತನ್ನ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸುವ ಮೊದಲು ಮಧ್ಯರಾತ್ರಿಯಲ್ಲಿ ನ್ಯಾಯಾಲಯಗಳನ್ನು ಏಕೆ ತಂದಿತು ಎಂದು ಪ್ರಶ್ನಿಸಿದ್ದಾರೆ.

- Advertisement -

ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿ ಆಗಿರಲಿಲ್ಲ. ಆದರೆ ಅಧಿಕಾರ ಕಳಕೊಂಡ ಬಳಿಕ ತುಂಬಾ ಡೇಂಜರಸ್ ಆಗಿದ್ದೇನೆ ಎಂದು ಹೇಳಿದ್ದಾರೆ. ಪೇಶಾವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ರಾನ್, ನನ್ನ ಅಧಿಕಾರವನ್ನು ತೆಗೆದುಹಾಕುವಲ್ಲಿ ವಿದೇಶಿ ಕೈಗಳಿವೆ ಎಂದು ನೂತನ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈವರೆಗೆ ಪ್ರತಿ ಯಾವುದೇ ನಾಯಕರನ್ನು ದೇಶದಲ್ಲಿ ಪದಚ್ಯುತಗೊಳಿಸಿದಾಗ ಜನರು ಸಂಭ್ರಮಾಚರಿಸುತ್ತಿದ್ದರು. ಆದರೆ ಈ ಬಾರಿ ಬೃಹತ್ ಪ್ರತಿಭಟನೆಗಳು ನಡೆದಿವೆ . ತನ್ನ ಸರ್ಕಾರವನ್ನು ಬೀಳಿಸುವುದರಲ್ಲಿ ವಿದೇಶಿ ರಾಷ್ಟ್ರಗಳು ಕೈಜೋಡಿಸಿದ್ದು, ಅಮೆರಿಕವು ಹೊಸ ಸರಕಾರವನ್ನು ಪಾಕಿಸ್ಥಾನದ ಮೇಲೆ ಹೇರುವ ಮೂಲಕ ಇಲ್ಲಿನ ಜನರನ್ನು ಅವಮಾನಿಸಿದೆ ಎಂದು ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.

Join Whatsapp