ಐಟಿ ಉದ್ಯೋಗದಲ್ಲಿ ಬೆಂಗಳೂರನ್ನು ಹಿಂದಿಕ್ಕಿದ ಹೈದರಾಬಾದ್

Prasthutha|

►‘ಜಾಬ್’ ಗಿಂತ ಹಿಜಾಬ್ ಬಗ್ಗೆ ಜಾಸ್ತಿ ಚಿಂತಿಸಿದರೆ ಇದೇ ಗತಿ : ಬಿಜೆಪಿ ಸರಕಾರವನ್ನು ಅಣಕಿಸಿದ TRS ಪಾರ್ಟಿ

- Advertisement -

ಬೆಂಗಳೂರು: 2022 ರಲ್ಲಿ ಭಾರತೀಯ ಐಟಿ ವಲಯದಲ್ಲಿ 4,50,000 ಉದ್ಯೋಗ ಹೆಚ್ಚಳವಾಗಿದ್ದು  ಬೆಂಗಳೂರನ್ನು ಹೈದರಾಬಾದ್ ಹಿಂದಿಕ್ಕಿದೆ.

ಹೈದರಾಬಾದ್ 1,53,000 ಹೊಸ ಉದ್ಯೋಗಗಳೊಂದಿಗೆ ಮುಂಚೂಣಿಯಲ್ಲಿದ್ದರೆ. ಬೆಂಗಳೂರು 1,48,500 ಹೊಸ ಉದ್ಯೋಗಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂಬೈ ನಗರವು 54,000 ಹೊಸ ಉದ್ಯೋಗಗಳನ್ನು ಸೇರಿಸಿದೆ. ಪುಣೆ ನಗರದ 40,500 ಉದ್ಯೋಗಗಳಿಗೆ ಹೋಲಿಸಿದರೆ, ಐಟಿ ಉದ್ಯೋಗದಲ್ಲಿ ಚೆನ್ನೈ ಕೊನೆಯ ಸ್ಥಾನದಲ್ಲಿದೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷವು ಐಟಿ ವಲಯಗಳ ಡೇಟಾ ಅನಾಲಿಟಿಕ್ಸ್ ಅನ್ನು ಹಂಚಿಕೊಂಡು, ಪ್ರಿಯ ಕರ್ನಾಟಕದ ಬಿಜೆಪಿ ಸರಕಾರವೇ ನಮಸ್ಕಾರ, ಐಟಿ ಉದ್ಯೋಗದಲ್ಲಿ ಹೈದರಾಬಾದ್ ಬೆಂಗಳೂರನ್ನು ಹಿಂದಿಕ್ಕಿದೆ. ಇದರ ಬಗ್ಗೆ ನಿಮಗೆ ತಿಳಿದಿದೆಯೇ, ನೀವು ಈಗಾಲಾದರೂ ಹಿಜಾಬ್ ಗಿಂತ ಜಾಬ್ ಮುಖ್ಯ ಎಂದು ಅರ್ಥ ಮಾಡಿಕೊಂಡಿದ್ದೀರಿ ಎಂದು ನಾವು ಭಾವಿಸುತ್ತೇವೆ ಎಂದು ವ್ಯಂಗ್ಯ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮತ್ತದರ ಸಹ ಸಂಘಟನೆಗಳು ಹಿಜಾಬ್ ಕುರಿತು ಅತಿಹೆಚ್ಚು ವಿವಾದವನ್ನು ಭುಗಿಲೆಬ್ಬಿಸಿತ್ತು. ಬಳಿಕ ಪ್ರಕಟಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಫಲಿತಾಂಶದಲ್ಲಿ ಬುದ್ಧಿವಂತರ ಜಿಲ್ಲೆಗೆ ಹಿನ್ನೆಡೆಯಾದಾಗ ರಾಜ್ಯದ ಜನರು ಇದೇ ಮಾತುಗಳನ್ನು ಆಡಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಹಿಂದೆ ಬೀಳುವುದರ ಬದಲಿಗೆ ಕಲಿಕೆಯೆಡೆಗೆ ಗಮನಕೊಡಿ ಎಂಬ ಸಲಹೆ ನೀಡಿದ್ದರು.

Join Whatsapp