ನವದೆಹಲಿ : ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಈ ಬಾರಿ ಎರಡು ಸ್ಥಾನ ಕುಸಿತ ಕಂಡಿದ್ದು, ಜಗತ್ತಿನ 189 ರಾಷ್ಟ್ರಗಳಲ್ಲಿ 131ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ ಬಂದಿದೆ. ದೇಶದ ಆರೋಗ್ಯ, ಶಿಕ್ಷಣ ಮತ್ತು ಜೀವನದ ಗುಣಮಟ್ಟವನ್ನು ಆಧರಿಸಿ ಮಾನವ ಅಭಿವೃದ್ಧಿ ಸೂಚ್ಯಂಕ ನೀಡಲಾಗುತ್ತದೆ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳೆದ ಬಾರಿ 129ನೇ ಸ್ಥಾನದಲ್ಲಿದ್ದ ಭಾರತ, ಈ ಬಾರಿ 131ನೇ ಸ್ಥಾನಕ್ಕೆ ಕುಸಿದಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ವಿಭಾಗದ ವರದಿ ತಿಳಿಸಿದೆ.
ನೆರೆರಾಷ್ಟ್ರಗಳಾದ ಶ್ರೀಲಂಕಾ 72, ಚೀನಾ 85, ಭೂತಾನ್ 129, ಬಾಂಗ್ಲಾದೇಶ್ 133, ನೇಪಾಳ 142 ಮತ್ತು ಪಾಕಿಸ್ತಾನ 154ನೇ ಸ್ಥಾನದಲ್ಲಿವೆ.
2020ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ, 2019ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 69.7 ವಯಸ್ಸುಗಳಾಗಿದ್ದರೆ, ಬಾಂಗ್ಲಾದೇಶದಲ್ಲಿ 72.6 ಮತ್ತು ಪಾಕಿಸ್ತಾನದಲ್ಲಿ 67.3 ವರ್ಷಗಳು ಎಂದು ತಿಳಿಸಲಾಗಿದೆ.
ಐರ್ಲ್ಯಾಂಡ್, ಸ್ವಿಝರ್ ಲ್ಯಾಂಡ್, ಹಾಂಗ್ ಕಾಂಗ್ ಮತ್ತು ಐಸ್ ಲ್ಯಾಂಡ್ ಈ ಸೂಚ್ಯಂಕದಲ್ಲಿ ಟಾಪ್ ಸ್ಥಾನಗಳಲ್ಲಿವೆ.