ಗುಜರಾತ್ ಬಂದರಿನಲ್ಲಿ ಮತ್ತೆ ಭಾರಿ ಪ್ರಮಾಣದ ಮಾದಕ ವಸ್ತು ವಶ

Prasthutha|

ಅಹ್ಮದಾಬಾದ್: ಸುಮಾರು 400 ಕೋಟಿ ರೂ ಮೌಲ್ಯದ 77 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ಪಾಕಿಸ್ತಾನದ ‘ಅಲ್ ಹುಸೇನಿ’ ಎಂಬ ಮೀನುಗಾರಿಕಾ ದೋಣಿಯನ್ನು ಗುಜರಾತ್ ಕರಾವಳಿಯ ಭಾರತೀಯ ಜಲಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಕಚೇರಿ (PRO) ಸೋಮವಾರ ಮಾಹಿತಿ ನೀಡಿದೆ.

- Advertisement -

ಭಾರತೀಯ ಕೋಸ್ಟ್ ಗಾರ್ಡ್ (ICG) ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ನೊಂದಿಗೆ ಜಂಟಿ ಕಾರ್ಯಾಚರಣೆಯನ್ನು ನಡೆಸಿ ದೋಣಿಯಲ್ಲಿದ್ದ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. “ಭಾರತೀಯ ಕೋಸ್ಟ್ ಗಾರ್ಡ್, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 400 ಕೋಟಿ ರೂ ಮೌಲ್ಯದ 77 ಕೆಜಿ ಹೆರಾಯಿನ್ ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿ ‘ಅಲ್ ಹುಸೇನಿ’ ಮತ್ತು 6 ಸಿಬ್ಬಂದಿಯನ್ನು ಭಾರತೀಯ ಜಲಪ್ರದೇಶದಲ್ಲಿ ವಶಪಡಿಸಿಕೊಂಡಿದ್ದಾರೆ” ಎಂದು PRO ಗುಜರಾತ್ ಡಿಫೆನ್ಸ್ ಟ್ವೀಟ್ ಮಾಡಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಆಪ್ತ ಗೌತಮ್ ಅದಾನಿ ಮಾಲೀಕತ್ವದಲ್ಲಿರುವ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಸುಮಾರು ಮೂರು ಟನ್‌ಗಳಷ್ಟು 20 ಸಾವಿರ ಕೋಟಿ ರೂಪಾಯಿ ಮೌಲ್ಯಗಳ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು ಇದು ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

Join Whatsapp