ನಟಿ ಐಶ್ವರ್ಯಾ ರೈಗೆ ED ಸಮನ್ಸ್

Prasthutha|

ಮುಂಬೈ: ‘ಪನಾಮ ಪೇಪರ್ಸ್​ ಲೀಕ್​’ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

- Advertisement -

ಇಡಿ ತನಿಖೆ ನಡೆಸುತ್ತಿರುವ ‘ಪನಾಮ ಪೇಪರ್ಸ್​ ಲೀಕ್’ ಪ್ರಕರಣಕ್ಕೆಈ ಸಮನ್ಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಲು ಬೇರೆ ದಿನ ನಿಗದಿ ಮಾಡುವಂತೆ ಐಶ್ವರ್ಯಾ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp