ಮೂಡಬಿದಿರೆ | MITE ಕಾಲೇಜಿನ ಬೃಹತ್ ತಡೆಗೋಡೆ ಕುಸಿದು ಕಾರುಗಳು ಜಖಂ

Prasthutha|

ಮೂಡಬಿದಿರೆ: MITE ಕಾಲೇಜಿನ ತಡೆಗೋಡೆ ಕುಸಿದು ಹಲವಾರು ವಾಹನಗಳು ಜಖಂ ಆದ ಘಟನೆ ಮೂಡಬಿದಿರೆ ಸಮೀಪದ ಮಿಜಾರಿನಲ್ಲಿ ನಡೆದಿದೆ.

- Advertisement -

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ MITE ಕಾಲೇಜಿನ ಬೃಹತ್ ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆಯ ಕೆಳಭಾಗದ ರಸ್ತೆಯಲ್ಲಿದ್ದ ಕಾರುಗಳ ಮೇಲೆ ಮಣ್ಣು ಕುಸಿದು ಬಿದ್ದಿದ್ದು, ಕೆಲವು ಕಾರುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿವೆ.

ಮೂಡಬಿದಿರೆಯ ಖ್ಯಾತ ಕಾಲೇಜ್ ಆಗಿರುವ ಮಂಗಳೂರು ತಾಂತ್ರಿಕ ಮತ್ತು ಇಂಜಿನಿಯರಿಂಗ್ ಸಂಸ್ಥೆ (MITE) ಗೆ ಅಳವಡಿಸಲಾಗಿರುವ ಬೃಹತ್ ತಡೆಗೋಡೆ ಕುಸಿತದಿಂದ ಕೆಲವು ಕಾರುಗಳು ಜಖಂ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

Join Whatsapp