ಅಮೆರಿಕದಲ್ಲಿ ಭಾರೀ ಪ್ರಮಾಣದ ಆಸ್ತಿ ಇರುವ ಶಂಕೆ; ಪುತಿನ್‌ ಪುತ್ರಿಯರಿಗೆ ಅಮೆರಿಕ ನಿರ್ಬಂಧ

Prasthutha|

ವಾಷಿಂಗ್ಟನ್: ರಷ್ಯಾದ ಮೇಲೆ ಹಲವು ರೀತಿಯ ದಿಗ್ಬಂಧನಗಳನ್ನು ಹೇರಿರುವ ಅಮೆರಿಕ ಸರಕಾರ ಈಗ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಇಬ್ಬರು ಹೆಣ್ಣು ಮಕ್ಕಳಾದ ಕ್ಯಾಥರೀನಾ ಟಿಕೋರ್ನೋವಾ  ಮತ್ತು ಮರಿಯಾ ಪುತಿನ್ ಮೇಲೂ ನಿರ್ಬಂಧ ಹೇರಿದೆ. 

- Advertisement -

ಅಮೆರಿಕ ಸರಕಾರದ ಪ್ರಕಾರ ಪುತಿನ್ ಅವರ ಬಹುಕೋಟಿ ಡಾಲರ್ ಮೊತ್ತದ ಆಸ್ತಿ ಕುಟುಂಬದ ಸದಸ್ಯರ ಹೆಸರಿನಲ್ಲಿದೆ. ಹೀಗಾಗಿ ಅವರ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಬೈಡೆನ್ ಸರಕಾರ ಹೇಳಿದೆ.

ಪುತಿನ್ ಮಕ್ಕಳ ಹೆಸರಿನಲ್ಲಿಯೂ ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿ ಇರುವ ಸಾಧ್ಯತೆ ಇದೆ.  ಗಮನಾರ್ಹವೆಂದರೆ ಲೈಡ್ಮಿಲಾ ಪುತಿನ್ ರ ಜತೆಗಿನ ದಾಂಪತ್ಯದಿಂದ ಜನಿಸಿದ ಈ ಹೆಣ್ಣು ಮಕ್ಕಳನ್ನು ವ್ಲಾದಿಮಿರ್ ಪುತಿನ್ ಇನ್ನೂ ತನ್ನ ಮಕ್ಕಳೆಂದು ಅಂಗೀಕರಿಸಿಲ್ಲ. ಪುತಿನ್ ಮಕ್ಕಳಂತೆಯೇ ಅಲ್ಲಿನ ವಿದೇಶಾಂಗ ಸಚಿವ ಸರ್ಗೆ ಲಾವ್ರೋ ಪತ್ನಿ ಮತ್ತು ಪುತ್ರಿ ಕೂಡ ಅಮೆರಿಕದಲ್ಲಿ ಹೇರಳವಾಗಿ ಆಸ್ತಿ ಹೊಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.



Join Whatsapp