ಅನೈತಿಕ ಸಂಬಂಧ ಶಂಕೆ:ಹೆಂಡತಿ ಮೇಲೆ ಬಿಸಿ ಎಣ್ಣೆ ಸುರಿದ ಗಂಡ

Prasthutha|

ಬೆಂಗಳೂರು: ಅನೈತಿಕ ಸಂಬಂಧ ಇದೆ ಎಂದು ಸಂಶಯ ಪಟ್ಟು ಹೆಂಡತಿ ಮೇಲೆ  ಬಿಸಿ ಎಣ್ಣೆ ಸುರಿದ ಘಟನೆಯು  ನಗರದ ಆಡುಗೋಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ಬಂಧಿತ ಅರೋಪಿ ಥಾಮಸ್ ಹೆಂಡತಿ ಅಂತೋಣಿಯಮ್ಮ ಮೇಲೆ ಬಿಸಿ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾನೆ. ದಂಪತಿ ಆಡುಗೋಡಿಯ ಎಲ್ ಆರ್ ನಗರದಲ್ಲಿ ವಾಸಿಸುತ್ತಿದ್ದು, ಅನೈತಿಕ ಸಂಬಂಧ ಕುರಿತಂತೆ ಸಂಶಯ ಪಟ್ಟಿದ್ದ ಥಾಮಸ್ ಪತ್ನಿಯೊಂದಿಗೆ ಗಲಾಟೆ ಮಾಡಿದ್ದಲ್ಲದೇ ದೊಣ್ಣೆಯಿಂದ ಪತ್ನಿ ಮೇಲೆ ಹಲ್ಲೆ ಮಾಡಿ ಪ್ರಜ್ಞೆ ತಪ್ಪುವಂತೆ ಮಾಡಿದ್ದ. ನಂತರ ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿ ಕುದಿಯುತ್ತಿದ್ದ ಬಿಸಿ ಎಣ್ಣೆಯನ್ನ ಪತ್ನಿ ಮೇಲೆ ಎರಚಿದ್ದಾನೆ ಎನ್ನಲಾಗಿದೆ.

ಪರಿಣಾಮ ಮುಖ, ಎದೆ, ಹೊಟ್ಟೆ, ಕಾಲು, ಕೈಗಳು ಸುಟ್ಟು ಹೋಗಿವೆ. ಈ ವೇಳೆ ಅಡ್ಡ ಬಂದಿದ್ದ ಮಗಳ ಮೇಲೂ ಬಿಸಿ ಎಣ್ಣೆ ಚೆಲ್ಲಿದ್ದ ಎನ್ನಲಾಗಿದೆ.ಸದ್ಯ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂತೋಣಿಯಮ್ಮ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿರುವ ಆಡುಗೋಡಿ ಠಾಣೆ ಪೊಲೀಸರು ಆರೋಪಿ ಥಾಮಸ್ ನನ್ನು ಬಂಧಿಸಿದ್ದಾರೆ.

Join Whatsapp