ಪ್ರವಾದಿ ನಿಂದನೆಯ ವಿರುದ್ಧ ಅಮೇರಿಕಾದ ವಿವಿಧ ನಗರಗಳಲ್ಲಿ ಪ್ರತಿಭಟನೆ

Prasthutha|

ಪ್ರವಾದಿ ನಿಂದನೆಗೈದ ಬಿಜೆಪಿ ವರಿಷ್ಠೆ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ವ್ಯಾಪಕ ವಿರೊಧಗಳು ವ್ಯಕ್ತವಾಗುತ್ತಿದ್ದು, ದೇಶಾದ್ಯಂತ ಮಾತ್ರವಲ್ಲದೆ ವಿದೇಶದಾದ್ಯಂತವೂ ಪ್ರತಿಭಟನೆಗಳ ಕಾವು ತೀವ್ರವಾಗುತ್ತಿದೆ.

- Advertisement -

ಪ್ರವಾದಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ಮತ್ತು ಪ್ರಚಲಿತ ಭಾರತದಲ್ಲಿ ಮುಸ್ಲಿಮರ ಮೇಲೆ ಆಗುತ್ತಿರುವ ದಬ್ಬಾಳಿಕೆಗಳ ವಿರುದ್ಧ ಅಮೆರಿಕಾದ ಹಲವು ನಗರಗಳಲ್ಲಿ ಪ್ರತಿಭಟನೆ ಜರುಗಿತು.

ಅಮೆರಿಕಾದ ನ್ಯೂಯಾರ್ಕ್, ಹೌಸ್ಟನ್, ಟೆಕ್ಸಾಸ್ ಮತ್ತು ಚಿಕಾಗೋ ನಗರಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Join Whatsapp