ಬೈತುರಹಮ್‌ ಮನೆ ನಿರ್ಮಾಣಕ್ಕಾಗಿ ಆರ್ಥಿಕ ನೆರವು ನೀಡಿದ ದುಬೈ ಕೆಎಂಸಿಸಿ ಮಂಜೇಶ್ವರ ಪಂಚಾಯತ್ ಸಮಿತಿ

Prasthutha|


ಮಂಜೇಶ್ವರ: ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯತ್ ಹತ್ತನೇ ವಾರ್ಡಿ ನ ಮುಸ್ಲಿಂ ಲೀಗ್ ಕಾರ್ಯಕರ್ತ ಅಬ್ದುಲ್ ಲತೀಫ್ ರವರಿಗೆ ಹತ್ತನೇ ವಾರ್ಡ್ ಸಮಿತಿ ವತಿಯಿಂದ ನಿರ್ಮಿಸಿ ಕೊಡುವ ಬೈತುರಹ್ಮ ಮನೆಗೆ ದುಬೈ ಕೆ.ಎಂ.ಸಿ.ಸಿ. ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ 3 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಯಿತು .

- Advertisement -

ಪಕ್ಷದ ಕಾರ್ಯಕರ್ತರಾದ ಅಬ್ದುಲ್ ಲತೀಫ್ ದೈಹಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲರಾಗಿದ್ದು ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಮುಸ್ಲಿಂ ಲೀಗ್ ಮಂಜೇಶ್ವರ ಸಮಿತಿಯ 10ನೇ ವಾರ್ಡು ಮರ್ಹೂಮ್ ಪಾಣಕ್ಕಾಡ್ ಸೈಯದ್ ಮುಹಮ್ಮದಲಿ ಶಿಹಾಬ್ ತಂಗಳವರ ಹೆಸರಿನಲ್ಲಿ ಕೇರಳದಾದ್ಯಂತ ಮುಸ್ಲಿಂ ಲೀಗ್ ಪಕ್ಷ ನಿರ್ಮಿಸಿ ಕೊಡುತ್ತಿರುವ ಬೈತು ರಹ್ಮಾ ಮನೆ ನಿರ್ಮಾಣ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದರು. ಇದೇ ಬರುವ ಅರೇಬಿಕ್ ತಿಂಗಳ ರಬೀವುಲ್ ಅವ್ವಲ್ 30ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು 10ನೇ ವಾರ್ಡ್ ಸಮಿತಿ ಹಾಗೂ ಕೆಎಂಸಿಸಿಯ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಸಭೆಯನ್ನು ಉದ್ಘಾಟಿಸಿ ಮಾತಾಡಿದ ಶಾಸಕರಾದ ಎ.ಕೆ.ಎಂ. ಅಶ್ರಫ್ ಬೈತುರಹಮಾ ನೀಡುವ ವಿಷಯದಲ್ಲಿ ಪಕ್ಷಕ್ಕಾಗಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದರು ಬಳಿಕ ಮಾತನಾಡಿದ ದುಬೈ ಕೆ.ಎಂ.ಸಿ.ಸಿ. ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಡಾ.ಅಬ್ದುಲ್ ರೆಹಮಾನ್ ಬಾವ ಮಂಜೇಶ್ವರದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಶಾಸಕರಿಗೆ ಪಕ್ಷವು ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು.ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಮಂಜೇಶ್ವರ ಪಂಚಾಯತ್ ಮುಸ್ಲಿಂ ಲೀಗ್ ಅಧ್ಯಕ್ಷರಾದ ಸೈಫುಲ್ಲಾ ತಂಗಳ್ ಮಂಜೇಶ್ವರದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ, ವಸತಿ ಮತ್ತು ಪ್ರವಾಸೋದ್ಯಮ ಯೋಜನೆಯ ಕರಡು ಪ್ರತಿಯನ್ನು ಮಂಡಿಸಿದರು.

ಸಭೆಯಲ್ಲಿ ಅಬ್ದುಲ್ಲಾ ಕಜೆ, ನಾಸರ್ ಇಡಿಯಾ, ಬಶೀರ್ ಉದ್ಯಾವರ, ಮುನೀರ್ ಪಾಂಡ್ಯಾಲ್, ಶುಕೂರ್ ಕುಂಜತ್ತೂರು, ಕುಂಜಿ ಗಂಜಾಲ್, ಅಶ್ಫಾಕ್ ಕರೋಡ, ಬಾವ ಹೊಸಂಗಡಿ, ಅನ್ಸಾಫ್ ಅರಿಮಲ, ಮಾತನಾಡಿದರು. ಹತ್ತನೇ ವಾರ್ಡು ಮುಸ್ಲಿಂ ಲೀಗ್ ಅಧ್ಯಕ್ಷ ಉಸ್ಮಾನ್ ಕಡಂಬಾರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ನ್ಯಾಯವಾಧಿ ಇಬ್ರಾಹಿಂ ಖಲೀಲ್ ಸ್ವಾಗತಿಸಿ, ಸಮದ್ ಅರಿಮಲ ವಂದಿಸಿದರು.

Join Whatsapp