ನೌಕರಿ ಕೊಡಿಸುವುದಾಗಿ ವಂಚಿಸಿ ಹನಿಟ್ರ್ಯಾಪ್| ಬಿಜೆಪಿ ಮುಖಂಡ ಸೇರಿದಂತೆ ಮೂವರ ಬಂಧನ

Prasthutha|

ಶಿರಸಿ: ನೌಕರಿ ಕೊಡಿಸುವುದಾಗಿ ವಂಚಿಸಿ ಹನಿಟ್ರ್ಯಾಪ್ ನಡೆಸುತ್ತಿದ್ದ ಬಿಜೆಪಿ ನಾಯಕ ಶಿರಸಿಯ ಅಜೀತ ಶ್ರೀಕಾಂತ ನಾಡಿಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


ಶಿರಸಿಯ ಅಜೀತ ಶ್ರೀಕಾಂತ ನಾಡಿಗ, ಧನುಶ್ಯ ಕುಮಾರ ದಿಲೀಪಕುಮಾರ ಶೆಟ್ಟಿ ಹಾಗೂ ಶಿವಮೊಗ್ಗದ ಶ್ರೀಮತಿ ಪದ್ಮಜಾ ಡಿ. ಎನ್. ಬಂಧಿತರು.


ಬಂಧಿತ ಆರೋಪಿಗಳ ಮೇಲೆ ಶಿರಸಿಯ ಹೊಸ ಮಾರುಕಟ್ಟೆ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ.
ಸರ್ಕಾರಿ ಖಾಯಂ ಉಪನ್ಯಾಸಕ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸಿ ದಿನಾಂಕ 17-01-2022 ರಂದು ಶಿವಮೊಗ್ಗಕ್ಕೆ ಕರೆಸಿಕೊಂಡು, ಕೋಣೆಯಲ್ಲಿ ಕೂಡಿಹಾಕಿ ನಗ್ನಗೊಳಿಸಿ, ಸಂತ್ರಸ್ತರ ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿ ಹನಿಟ್ರ್ಯಾಪ್ ಗೆ ಯತ್ನಿಸಿದ್ದ ಆರೋಪಿಗಳು ನಗ್ನ ಫೋಟೊ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಅಥವಾ ಇದನ್ನು ಡಿಲೀಟ್ ಮಾಡಬೇಕು ಎಂದಾದರೆ, 15,00,000.00 (15 ಲಕ್ಷ) ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

- Advertisement -

ಬಲವಂತವಾಗಿ ನಕಲಿ ದಾಖಲೆ ಸೃಷ್ಟಿಸಿ, ಕರಾರು ಪತ್ರ ಬರೆಸಿಕೊಂಡು, ಬ್ಲಾಂಕ್ ಚೆಕ್ ಪಡೆದುಕೊಂಡಿದ್ದಾರೆ. ಹಣ ಕೊಡದೇ ಇದ್ದರೆ ಕೊಲೆ ಮಾಡಲಾಗುವುದು ಎಂದು ಹೆದರಿಸಿದ್ದಾರೆ. ಎಂದು ಎಪ್ಐಆರ್ ನಲ್ಲಿ ದಾಖಲಿಸಲಾಗಿದೆ.ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ, ಎಸ್.ಪಿ. ಸುಮನ್ ಡಿ. ಪನ್ನೇಕರ್ ಅವರು ವಿಶೇಷ ತಂಡ ರಚಿಸಿ, ಆರೋಪಿಗಳನ್ನು ಹುಡುಕಿ 24 ಗಂಟೆಯೊಳಗೆ ಬಂಧಿಸಿದ್ದಾರೆ.ಈ ಮೂವರ ವಿರುದ್ಧ ಐಪಿಸಿ 386, 388, 406, 384, 342, 423 506 ಸಹಿತ 34 ಪ್ರಕರಣಗಳು ದಾಖಲಾಗಿವೆ.


Join Whatsapp