ದೇಶದ ಇತಿಹಾಸದಲ್ಲೇ ಕಂಡರಿಯದ ಆರ್ಥಿಕ ಹಿಂಜರಿತ | ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಶೇ. 8.6 ಕುಸಿತ

Prasthutha|

ನವದೆಹಲಿ : ಭಾರತದ ಇತಿಹಾದಲ್ಲೇ ಇದೇ ಮೊದಲ ಬಾರಿಗೆ ಸತತ ತೀವ್ರ ಆರ್ಥಿಕ ಕುಸಿತ ದಾಖಲಾಗಿದೆ. 2020-21 ಹಣಕಾಸು ವರ್ಷದ ಮೊದಲಾರ್ಧದ ಅಂತ್ಯದಲ್ಲಿ ತಾಂತ್ರಿಕ ಹಣಕಾಸು ಹಿಂಜರಿತ ಆಗಿದೆ ಎಂದು ಸ್ವತಃ ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾವೇ ಹೇಳಿದೆ.

ಆರ್ ಬಿಐ ಬಿಡುಗಡೆಗೊಳಿಸಿರುವ ಆರ್ಥಿಕ ಬುಲೆಟಿನ್ ನಲ್ಲಿ ಈ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ.

- Advertisement -

ಏಪ್ರಿಲ್ – ಜೂನ್ ತ್ರೈಮಾಸಿಕ ಅವಧಿಯಲ್ಲಿ ಹಿಂದೆಂದೂ ಕಂಡರಿಯದ -23.9 ಜಿಡಿಪಿ ದಾಖಲಾಗಿತ್ತು. ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲೂ ಶೇ.8.6ರಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ಸತತ ತ್ರೈಮಾಸಿಕ ಅವಧಿಯಲ್ಲಿ ತೀವ್ರ ಕುಸಿತ ಕಂಡು ಬರುವುದು ಆರ್ಥಿಕ ಕುಸಿತದ ಲಕ್ಷಣವಾಗಿದೆ. ಅಧಿಕೃತ ಜಿಡಿಪಿ ಈ ತಿಂಗಳಾಂತ್ಯಕ್ಕೆ ಪ್ರಕಟವಾಗಲಿದೆ.

ಈ ವರ್ಷ ಶೇ.9.5ರಷ್ಟು ಜಿಡಿಪಿ ಕುಸಿತ ಕಾಣಬಹುದೆಂದು ಅಂದಾಜಿಸಲಾಗಿದೆ. ಮಾರ್ಚ್-ಏಪ್ರಿಲ್ ನಲ್ಲಿ ಕೋವಿಡ್ 19 ಕಾರಣಕ್ಕಾಗಿ ಸಂಪೂರ್ಣ ಲಾಕ್ ಡೌನ್ ಇದ್ದುದರಿಂದ ಇಡೀ ದೇಶವೇ ಸ್ಥಬ್ಧಗೊಂಡಿತ್ತು. ಹೀಗಾಗಿ, ದೊಡ್ಡಮಟ್ಟದ ಆರ್ಥಿಕ ಹಿಂಜರಿತಕ್ಕೆ ಇದು ಕಾರಣವಾಗಿತ್ತು.

ಆದಾಗ್ಯೂ, ಅಕ್ಟೋಬರ್ – ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಧನಾತ್ಮಕ ಬೆಳವಣಿಗೆಗಳು ನಡೆಯಲಿವೆ ಎಂದು ಆರ್ ಬಿಐ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಜಿಡಿಪಿ ಕುಸಿತಕ್ಕೆ ಕೋವಿಡ್ ಲಾಕ್ ಡೌನ್ ಒಂದು ಕಾರಣವಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಬಿಜೆಪಿ ಸರಕಾರದ ಹಣಕಾಸು ನೀತಿ, ಕೋವಿಡ್ ಪರಿಸ್ಥಿತಿ ನಿರ್ವಹಣೆಯ ಅವ್ಯವಸ್ಥೆಯೂ ಕಾರಣ ಎನ್ನಲಾಗುತ್ತಿದೆ.

- Advertisement -