ಹನುಮಾನ್ ಚಿತ್ರವನ್ನು ತೆಗೆದುಹಾಕಿದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್’ಎಎಲ್)

Prasthutha|

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್’ಎಎಲ್) ಮಂಗಳವಾರದಂದು ಎಚ್’ಎಲ್’ಎಫ್’ಟಿ-42 ಯುದ್ಧ ವಿಮಾನ ಮಾದರಿ ಮೇಲಿದ್ದ ಹನುಮಾನ್ ಚಿತ್ರವನ್ನು ತೆಗೆದುಹಾಕಿದೆ.

- Advertisement -

ಯುದ್ಧ ವಿಮಾನದ ಹಿಂಬದಿಯ ರೆಕ್ಕೆಯಲ್ಲಿದ್ದ ‘ಚಂಡಮಾರುತ ಬರುತ್ತಿದೆ’ ಎನ್ನುವ ಘೋಷ ವಾಕ್ಯದ ಜತೆಗೆ ಹನುಮಾನ್ ಚಿತ್ರವನ್ನು ಮಂಗಳವಾರದಂದು ತೆಗೆದುಹಾಕಲಾಗಿದೆ. ‘ಎಚ್ ಎಫ್-24 ಮಾರುತ್ ಎನ್ನುವ ಎಚ್’ಎಎಲ್ ಯುದ್ಧ ವಿಮಾನ ಹಿಂದೆಯೂ ಇತ್ತು. ಇದೇ ಹೆಸರನ್ನು ಇಲ್ಲಿ ಬಳಸಲಾಗಿದೆ’ ಎಂದು ಎಚ್’ಎಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತರಬೇತಿ ನೀಡಲು ಈ ಯುದ್ಧ ವಿಮಾನವನ್ನು ಬಳಸಲು ಉದ್ದೇಶಿಸಲಾಗಿದೆ. ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ-2023’ರಲ್ಲಿ ಇದೇ ಮೊದಲ ಬಾರಿ ಈ ವಿಮಾನದ ಮಾದರಿಯನ್ನು ಪ್ರದರ್ಶಿಸಲಾಗಿದೆ. ‘ಯುದ್ಧ ವಿಮಾನದ ಶಕ್ತಿಯನ್ನು ಬಿಂಬಿಸುವ ಉದ್ದೇಶದಿಂದ ಈ ಚಿತ್ರ ಹಾಕಲಾಗಿತ್ತು’ ಎಂದು ಎಚ್’ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತ್ ಕೃಷ್ಣನ್ ಹೇಳಿದರು.



Join Whatsapp