ಹಿಂದೂಗಳು ಮನೆಯಲ್ಲಿ ಹರಿತವಾದ ಆಯುಧಗಳನ್ನು ಇಟ್ಟುಕೊಳ್ಳಬೇಕು: ಪ್ರಜ್ಞಾ ಸಿಂಗ್ ಠಾಕೂರ್

Prasthutha|

ಶಿವಮೊಗ್ಗ: ತಮ್ಮ ಮೇಲೆ ಹಲ್ಲೆ ಮಾಡುವವರಿಗೆ ಮತ್ತು ತಮ್ಮ ಆತ್ಮಗೌರವದ ಮೇಲೆ ದಾಳಿ ಮಾಡುವವರಿಗೆ ತಕ್ಕ ಉತ್ತರ ನೀಡುವ ಹಕ್ಕು ಹಿಂದೂಗಳಿಗೆ ಇದೆ. ಆದ್ದರಿಂದ ಆತ್ಮರಕ್ಷಣೆಗಾಗಿ ಜನರು ತಮ್ಮ ಮನೆಯಲ್ಲಿ ಹರಿತವಾದ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದು ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಹಿಂದೂ ಜಾಗರಣ ವೇದಿಕೆಯ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಲವ್ ಜಿಹಾದ್” ಜಿಹಾದ್ ಸಂಪ್ರದಾಯವನ್ನು ಹೊಂದಿದೆ. ಲವ್ ಮಾಡಿದರೆ ಅದರಲ್ಲಿಯೂ ಜಿಹಾದ್ ಕಾಣುತ್ತಾರೆ. ನಾವು (ಹಿಂದೂಗಳು) ಲವ್ ಜಿಹಾದ್ ಮಾಡುವವರಿಗೆ ಉತ್ತರ ನೀಡಬೇಕಾಗಿದೆ. ನಿಮ್ಮ ಹೆಣ್ಣುಮಕ್ಕಳನ್ನು ರಕ್ಷಿಸಿ, ಅವರಿಗೆ ನಿಜವಾದ ಮೌಲ್ಯಗಳನ್ನು ಕಲಿಸಿ, ”ಎಂದು ಹೇಳಿದರು.

- Advertisement -


ಶಿವಮೊಗ್ಗದ ಹರ್ಷ ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಉಲ್ಲೇಖಿಸಿದ ಅವರು, ಆತ್ಮರಕ್ಷಣೆಗಾಗಿ ಜನರು ತಮ್ಮ ಮನೆಯಲ್ಲಿ ಹರಿತವಾದ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

- Advertisement -