ಬರೇಲಿ : ಭಾರತದ ಹಿಂದೂಗಳು ಮತ್ತು ಮುಸ್ಲಿಮರು ಜೊತೆ ಸೇರಿ ದೇಶವನ್ನು ಬ್ರಿಟೀಷರಿಂದ ಮುಕ್ತಿಗೊಳಿಸಿದ್ದಾರೆ. ಇಂದಿಗೂ ಈ ಎರಡೂ ಜನಾಂಗ ಭಾರತದ ಪ್ರಗತಿ ಮತ್ತು ಸಮೃದ್ಧಿಗಾಗಿ ಜೊತೆಗೂಡಿ ಕೆಲಸ ಮಾಡುತ್ತಿದೆ. ಮತ್ತು ಇವರು ದೇಶವನ್ನು ಒಂದು ಹೊಸ ಉತ್ತುಂಗದತ್ತ ಕೊಂಡೊಯ್ಯಲಿದ್ದಾರೆ ಎಂದು ತಂಝೀಮ್ ಉಲೇಮಾ ಎ ಇಸ್ಲಾಂನ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಹಾಬುದ್ದೀನ್ ರಝ್ವಿ ಹೇಳಿದ್ದಾರೆ.
ಅವರು ಇಲ್ಲಿ ಆಯೋಜಿಸಲಾಗಿದ್ದ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
1942 ಆಗಸ್ಟ್ 8ರಂದು ಮುಂಬೈಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಚಳವಳಿಗೆ ನಾಂದಿ ಹಾಡಿದರು. ಅದರ ಮರುದಿನವೇ ಗಾಂಧಿ, ನೆಹರು ಸಹಿತ ಹಲವರು ನಾಯಕರು ಬ್ರಿಟೀಷರಿಂದ ಬಂಧನಕ್ಕೊಳಗಾದರು ಎಂದು ರಝ್ವಿ ಹೇಳಿದರು.
ಮುಫ್ತಿ ಸಿರಾಜುದ್ದೀನ್ ಖಾದ್ರಿ, ಮೌಲಾನಾ ಶೀಬ್ ರಝಾ, ಮೌಲಾನಾ ದಿಲ್‌ಕಾಶ್, ಮೌಲಾನಾ ಸಲೀಂ ರಝ್ವಿ, ಮೌಲಾನಾ ಇದ್ರೀಸ್ ನೂರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.