ಅಬುಧಾಬಿ: ಭಾರತದ ಈಶಾನ್ಯ ರಾಜ್ಯ ತ್ರಿಪುರಾ ರಾಜ್ಯದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸಂಘಪರಿವಾರ ನಡೆಸುತ್ತಿರುವ ಹಿಂಸಾಚಾರವನ್ನು ದುಬೈ ರಾಜಕುಮಾರಿ ಶೇಖಾ ಹೆಂದ್, ಟ್ವೀಟ್ ಮೂಲಕ ಕಟುವಾಗಿ ಖಂಡಿಸಿದ್ದಾರೆ.
ತ್ರಿಪುರಾ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು “ ಹಿಂದೂ ಧರ್ಮ ಹಿಂಸೆ, ಸಂಘರ್ಷವನ್ನು ವಿರೋಧಿಸಲು ಬೋಧಿಸುವ ಮತ್ತು ನೈತಿಕ ಕರ್ತವ್ಯವನ್ನು ಪ್ರಚಾರ ಪಡಿಸುವ ಉತ್ತಮ ಆದರ್ಶವಾಗಿದೆ. ನೈಜ ಹಿಂದೂಗಳು ಮಹಿಳೆ, ಮಕ್ಕಳು, ವೃದ್ಧರು, ಮನೆ ಮತ್ತು ಪೂಜಾ ಸ್ಥಳಗಳ ಮೇಲೆ ದಾಳಿ ಮಾಡುವುದಿಲ್ಲ. ಪ್ರಸಕ್ತ ತ್ರಿಪುರಾದ ಕೊಲೆಗಾರರು ಹಿಂದೂಗಳಲ್ಲ, ಭಯೋತ್ದಾದಕರು” ಎಂದು ಕಟು ಶಬ್ದಗಳಲ್ಲಿ ಟ್ವೀಟಿಸಿದ್ದಾರೆ.
ಪ್ರಸಕ್ತ ತ್ರಿಪುರಾದಲ್ಲಿ ಸರ್ಕಾರಿ ಪ್ರೇರಿತ ಸಂಘಪರಿವಾರ, ಮುಸ್ಲಿಮರನ್ನು ಗುರಿಯಾಗಿಸಿ ನಡೆಸುತ್ತಿರುವ ವ್ಯಾಪಕ ಹಿಂಸಾಚಾರಕ್ಕೆ ಭಾರತ ಸೇರಿದಂತೆ ಹಲವೆಡೆಯಿಂದ ಆಕ್ರೋಶ, ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾತ್ರವಲ್ಲ ಈ ಸಂಬಂಧ ತ್ರಿಪುರಾ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾಗಿದ್ದು, ಪ್ರತಿಕ್ರಿಯಿಸುವಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.