ಗೋವಾ ಗೆಲ್ಲಲು ಮಮತಾ ಸರ್ಕಸ್| ಬಿಜೆಪಿ ಹಳೆ ಮಿತ್ರಪಕ್ಷದೊಂದಿಗೆ ಇಂದು ಮಾತುಕತೆ!

Prasthutha|

ಪಣಜಿ: ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ರಾಷ್ಟ್ರ ರಾಜಕಾರಣದತ್ತ ಗಮನ ಹರಿಸಿದ್ದಾರೆ.

- Advertisement -

ಮೊದಲ ಹೆಜ್ಜೆಯ ಭಾಗವಾಗಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ತ್ರಿಪುರಾ ಮತ್ತು ಗೋವಾದಲ್ಲಿ ದೀದಿ ಅಧಿಕಾರ ಹಿಡಿಯುವ ತವಕದಲ್ಲಿದ್ದಾರೆ. ಗೋವಾದ ಯೋಜನೆಯ ಭಾಗವಾಗಿ ಇಂದು ಮಮತಾ ಬ್ಯಾನರ್ಜಿ ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ವಿಜಯ್ ಸರ್ದೇಸಾಯಿ ಅವರನ್ನು ಭೇಟಿಯಾಗಲಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ಬಿಜೆಪಿ ಮೈತ್ರಿಕೂಟವನ್ನು ತೊರೆದ ಗೋವಾ ಫಾರ್ವರ್ಡ್ ಪಾರ್ಟಿ, ಮೈತ್ರಿಗಾಗಿ ತಾನು ಪ್ರಬಲ ಪಕ್ಷವನ್ನು ಹುಡುಕುತ್ತಿರುವುದಾಗಿ ಶುಕ್ರವಾರ ಹೇಳಿತ್ತು.

ಗೋವಾದಲ್ಲಿನ ಕೋಮುವಾದಿ ಮತ್ತು ಭ್ರಷ್ಟ ಆಡಳಿತವನ್ನು ಕೊನೆಗೊಳಿಸಲು ಪ್ರತಿಪಕ್ಷಗಳು ಒಂದಾಗಬೇಕು. ಆದ್ದರಿಂದ ಪಕ್ಷದ ಹಿರಿಯ ನಾಯಕರೊಂದಿಗೆ ಮಮತಾ ಅವರನ್ನು ಭೇಟಿಯಾಗುವುದಾಗಿ ಸರ್ದೇಸಾಯಿ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಚುನಾವಣೆ ಪ್ರಚಾರಕ್ಕಾಗಿ ಮೂರು ದಿನಗಳ ಗೋವಾ ಪ್ರವಾಸ ಕೈಗೊಂಡಿದ್ದಾರೆ.

- Advertisement -

ಗೋವಾ ಫಾರ್ವರ್ಡ್ ಪಾರ್ಟಿ (GFP) ಮೂರು ಶಾಸಕರನ್ನು ಹೊಂದಿದೆ. ಬಿಜೆಪಿ ಸರ್ಕಾರದಲ್ಲಿ GFP ಅಧ್ಯಕ್ಷ ಸರ್ದೇಸಾಯಿ ಉಪಮುಖ್ಯಮಂತ್ರಿಯಾಗಿದ್ದರು.

Join Whatsapp