ಭಾವೈಕ್ಯತೆಗೆ ಸಾಕ್ಷಿಯಾದ ಬಂಟ್ವಾಳದ ಹಿಂದೂ ಯುವಕ
ಮಂಗಳೂರು: ಪವಿತ್ರ ರಂಝಾನ್ ಉಪವಾಸ ಹಿನ್ನೆಲೆ ತನ್ನ ಮದುವೆ ಔತಣ ಕೂಟಕ್ಕೆ ಆಗಮಿಸಲು ಸಾಧ್ಯವಾಗದ ಮುಸ್ಲಿಂ ಸ್ನೇಹಿತರಿಗೆ ಊರ ಮಸೀದಿಯಲ್ಲೇ ಇಫ್ತಾರ್ ಕೂಟ ಆಯೋಜಿಸಿ ಹಿಂದೂ ಯುವಕನೋರ್ವ ಸಾಮರಸ್ಯಕ್ಕೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕು ಸಾಕ್ಷಿಯಾಯಿತು.
ವಿಟ್ಲ ಸಮೀಪದ ಬೈರಿಕಟ್ಟೆ ಇಲ್ಲಿನ ನಿವಾಸಿ ಚಂದ್ರಶೇಖರ ಜೆಡ್ಡು ಎಂಬವರ ವಿವಾಹ ಸಮಾರಂಭ ಏಪ್ರಿಲ್ 24 ರಂದು ನಡೆದಿತ್ತು. ಆದರೆ ಮುಸ್ಲಿಮರಿಗೆ ರಂಝಾನ್ ತಿಂಗಳಾದ ಕಾರಣ ಮದುವೆಗೆ ಬರಲಾಗಿರಲಿಲ್ಲ. ಇದಕ್ಕಾಗಿ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಸೋಮವಾರ ಸಂಜೆ ಏರ್ಪಡಿಸಲಾಗಿತ್ತು. ಇಫ್ತಾರ್ ಕೂಟದಲ್ಲಿ ಜಮಾಅತ್ ಎಲ್ಲ ಸದಸ್ಯರು ಭಾಗವಹಿಸಿದ್ದರಲ್ಲದೇ, ನವ ವಿವಾಹಿತನಿಗೆ ಶುಭವನ್ನೂ ಹಾರೈಸಿದರು.
ಇನ್ನು, ಇಫ್ತಾರ್ ಕೂಟ ಏರ್ಪಡಿಸಿದ ನವ ವಿವಾಹಿತ ಚಂದ್ರಶೇಖರ್ ಅವರಿಗೆ ಜಲಾಲಿಯಾ ಜುಮ್ಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಕಮಿಟಿ ವತಿಯಿಂದ ಪದಾಧಿಕಾರಿಗಳು, ಮಸೀದಿಯ ಧರ್ಮಗುರುಗಳು ಜೊತೆಯಾಗಿ ಸನ್ಮಾನಿಸಿದರು