RSS ಹೊರತಾಗಿ ಪ್ರತಿ ಸಮುದಾಯಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿ: ವಿಪಕ್ಷ ನಾಯಕ ತೇಜಸ್ವಿ ಯಾದವ್

Prasthutha|

ಪಾಟ್ನಾ: ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಆರೆಸ್ಸೆಸ್ ಹೊರತಾಗಿ ಹಿಂದೂ, ಮುಸ್ಲಿಮ್, ಸಿಖ್, ಕ್ರೈಸ್ತ, ಜೈನ, ಬೌದ್ಧ ಸೇರಿದಂತೆ ಎಲ್ಲ ಸಮುದಾಯದವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ದೇಶದ ವಿಮೋಚನೆಗೆ ಶ್ರಮಿಸಿದ್ದಾರೆ ಎಂದು ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ತಿಳಿಸಿದ್ದಾರೆ.

- Advertisement -

ಸದನದ ಕಲಾಪದ ವೇಳೆ ಮಾತನಾಡಿದ ಬಿಜೆಪಿ ಶಾಸಕ ಹರಿಭೂಷನ್ ಠಾಕೂರ್, ‘ಮುಸ್ಲಿಮರ ಮತದಾನದ ಹಕ್ಕನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ ಬೆನ್ನಲ್ಲೇ, ಮಧ್ಯಪ್ರವೇಶಿಸಿದ ತೇಜಸ್ವಿ ಯಾದವ್ ಅವರು ‘ಆರೆಸ್ಸೆಸ್ ಹೊರತುಪಡಿಸಿ ಇತರ ಎಲ್ಲಾ ಸಮುದಾಯಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿವೆ. ಆದರೆ ಅರೆಸ್ಸೆಸ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರೊಂದಿಗೆ ಶಾಮೀಲಾಗಿತ್ತು. ಈ ಸಂಘಟನೆ ತ್ರಿವರ್ಣ ಧ್ವಜದ ಮೇಲೆ ಗೌರವ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್, ಮುಸ್ಲಿಮರ ಮತದಾನದ ಹಕ್ಕನ್ನು ಕಸಿಯಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಆರೆಸ್ಸೆಸ್ ತನ್ನ ನಾಗ್ಪುರ ಪ್ರಧಾನ ಕಚೇರಿಯಲ್ಲಿ ಒಮ್ಮೆಯೂ ತ್ರಿವರ್ಣ ಧ್ವಜ ಹಾರಿಸಿದ ಇತಿಹಾಸವಿಲ್ಲ ಎಂದು ಆಕ್ರೋಶಿತರಾಗಿ ಹೇಳಿದರು.

Join Whatsapp