ರಾಜ್ಯ ಬಜೆಟ್ | ಅಂಗನವಾಡಿ ಸಹಾಯ ಧನ ಹೆಚ್ಚಳ: ಮಹಿಳೆಯರ ಅಭಿವೃದ್ಧಿಗಾಗಿ ಮಹತ್ವದ ಯೋಜನೆ

Prasthutha|

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಚೊಚ್ಚಲ ಬಜೆಟ್ ಮಂಡಿನೆ ಮಾಡಿದ್ದು, 2022-2023 ಸಾಲಿನ ಬಜೆಟ್ ನಲ್ಲಿ ಮಕ್ಕಳು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

- Advertisement -

ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿರುವ ಗೌರವಧನವನ್ನು ಸೇವೆಯ ಆಧಾರದ ಮೇಲೆ ಹೆಚ್ಚಿಸಲು ನಿರ್ಧರಿಸಲಾಗಿದೆ . 20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,500 ರೂ. ಹಾಗೂ 10-20 ವರ್ಷ ಸೇವೆ ಸಲ್ಲಿಸಿದವರಿಗೆ 1,250 ರೂ. ಮತ್ತು 10 ಕ್ಕಿಂತ ಕಡಿಮೆ ವರ್ಷ ಸೇವೆ ಸಲ್ಲಿಸಿದವರಿಗೆ 1,000 ರೂ.ಗಳನ್ನು ಹೆಚ್ಚಿಸಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಬಿಸಿಯೂಟ ತಯಾರಕರಿಗೆ ಹಾಗೂ ಸಹಾಯಕರಿಗೆ ನೀಡುವ ಗೌರವಧನವನ್ನು 1,000 ರೂ.ಗಳಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

ಮಹಿಳೆಯರಿಗಾಗಿಯೇ ಏನೆಲ್ಲಾ ಕೊಟ್ಟರು ಸಿಎಂ..?

 – ಯಶಸ್ವಿನಿ ಯೋಜನೆ ಜಾರಿಗೆ 300 ಕೋಟಿ ಅನುದಾನ

 – ಮಹಿಳೆಯರ ಸಬಲೀಕರಣ, ಕ್ಷೇಮಾಭಿವೃದ್ಧಿಗೆ 43,188 ಕೋಟಿ

 – ಮಕ್ಕಳ ಅಭ್ಯುದಯಕ್ಕೆ 40,944 ಕೋಟಿ ರೂ. ಮೀಸಲುಯಶಸ್ವಿನಿ ಯೋಜನೆ ಜಾರಿಗೆ 300 ಕೋಟಿ ಅನುದಾನ

 – ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳ

– ಗ್ರಾಮ ಸಹಾಯಕರಿಗೂ 1 ಸಾವಿರ ಗೌರವಧನ ಹೆಚ್ಚಳ

 – 2015ರಿಂದ ಸ್ಥಗಿತಗೊಂಡಿದ್ದ ಎನ್ಸಿಎಸ್ ಲೈಟ್ ಯೋಜನೆಯಿಂದ ವಂಚಿತರಾಗಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ 50 ಸಾವಿರ ರೂ,. ಮತ್ತು ಅಂಗನವಾಡಿ ಸಹಾಯಕರಿಗೆ 30 ಸಾವಿರ ರೂಪಾಯಿ ಇಡಿಗಂಟು ಪಾವತಿಸಲು ನಿರ್ಧರಿಸಲಾಗಿದೆ.

 – ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳ ಪ್ರಾರಂಭ. ಪ್ರಮುಖವಾಗಿ ಪ.ಜಾತಿ, ಪ.ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.

 – ಮೈಸೂರಿನ ಶಕ್ತಿಧಾಮ, ಬಸವ ಕಲ್ಯಾಣದಲ್ಲಿರುವ ಶ್ರೀ ನೀರಜಿ ಭುವ ವಿಸ್ವಸ್ಥ ನಿಧಿ ಹಾಗೂ ಬಸವನಗುಡಿಯಲ್ಲಿನ ಅಮೃತ ಶಿಶು ನಿವಾಸ ತಾಯಿ ಮತ್ತು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ವಿಶೇಷ ನೆರವು.

– ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2022-23ನೇ ಸಾಲಿನಲ್ಲಿ 40,944 ಕೋಟಿ ರೂಪಾಯಿ. ಮಹಿಳಾ ಉದ್ದೇಶಿ ಯೋಜನೆಗಳಿಗೆ 2022-23 ಸಾಲಿನಲ್ಲಿ ಒಟ್ಟು 43,118 ಕೋಟಿ ರೂಪಾಯಿ ಅನುದಾನ.

 – ಪ.ಜಾತಿ, ಪ.ಪಂಗಡ ಮತ್ತು ಅಲ್ಪ ಸಂಖ್ಯಾತ ಮಹಿಳೆಯರು ಮತ್ತು ಮಕ್ಕಳ ಉನ್ನತ ವಿದ್ಯಾಭ್ಯಾಸ ಪ್ರೋತ್ಸಾಹಿಸಲು, ಮೊಟ್ಟ ಮೊದಲ ಬಾರಿಗೆ ದೀನದಯಾಳ್ ಉಪಾಧ್ಯಾಯ ಸೌಂದರ್ಯ ವಿದ್ಯಾರ್ಥಿನಿಲಯ. ಬೆಳಗಾಗಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರಿನಲ್ಲಿ ತಲಾ 1000 ಸಾಮರ್ಥ್ಯದ ಬಹುಮಹಡಿಯ ವಿದ್ಯಾರ್ಥಿನಿಲಯ ಸಮುಚ್ಛಯಗಳನ್ನು 250 ಕೋಟಿ ರೂ. ಹೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ.

Join Whatsapp