ವಿವಾಹ ನೋಂದಾವಣೆಗೆ ತೆರಳಿದ ಹಿಂದೂ-ಮುಸ್ಲಿಂ ಜೋಡಿಯನ್ನು ತಡೆದ ಭಜರಂಗ ದಳ ಕಾರ್ಯಕರ್ತರು

Prasthutha|

ಮೊರಾದಾಬಾದ್: ತಮ್ಮ ವಿವಾಹವನ್ನು ನೋಂದಾಯಿಸಲು ಪ್ರಯತ್ನಿಸಿದ ಮುಸ್ಲಿಂ ವ್ಯಕ್ತಿ ಮತ್ತು 22ರ ಹರೆಯದ ಹಿಂದೂ ಮಹಿಳೆಯನ್ನು ಬಜರಂಗದಳದ  ಕಾರ್ಯಕರ್ತರು ಬೆದರಿಸಿ ಪೊಲೀಸರಿಗೊಪ್ಪಿಸಿದ ಘಟನೆ ಉತ್ತರ ಪ್ರದೇಶದ ಮೊರಾದಬಾದ್ ನ ಕಾಂಥ್ ಪ್ರದೇಶದಲ್ಲಿ ನಡೆದಿದೆ. ಬಲಪಂಥೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಆತನನ್ನು ಮತ್ತು ಆತನ ಸಹೋದರನನ್ನು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಮೂವರು ವಿವಾಹ ನೋಂದಾವಣಾ ಕಚೇರಿಯಲ್ಲಿದ್ದಾಗ ಬಜರಂಗದಳದ ಕಾರ್ಯಕರ್ತರು ಅವರನ್ನು ಮುಂದಿನ ಪ್ರಕ್ರಿಯೆ ಕೈಗೊಳ್ಳದಂತೆ ತಡೆದಿದ್ದು ನಂತರ ಮೂವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 1 ನಿಮಿಷ 11 ಸೆಕೆಂಡುಗಳ ವೀಡಿಯೊದಲ್ಲಿ ಪೊಲೀಸ್ ಠಾಣೆಯ ಆವರಣದಲ್ಲಿ ಪುರುಷರು ಮಹಿಳೆಯನ್ನು ಸುತ್ತುವರಿದಿರುವುದು ಕಾಣುತ್ತದೆ.

“ನಿನ್ನ ಮತವನ್ನು ಬದಲಾಯಿಸುವುದಕ್ಕಾಗಿ ನೀನು ಡಿಎಂ (ಜಿಲ್ಲಾ ಮ್ಯಾಜಿಸ್ಟ್ರೇಟ್) ರಿಂದ ಪಡೆದ ಅನುಮತಿಯನ್ನು ತೋರಿಸು” ಎಂದು ಪುರುಷನೋರ್ವ ಮಹಿಳೆಯೊಂದಿಗೆ ಪ್ರಶ್ನಿಸುವುದು ಕಾಣಿಸುತ್ತದೆ. ಇಬ್ಬರು ಪೊಲೀಸರೂ ವೀಡಿಯೊದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರಲ್ಲೋರ್ವ ಲಾಠಿ ಹಿಡಿದಿರುತ್ತಾನೆ.

“ನೀನು ಹೊಸ ಕಾನೂನನ್ನು ಓದಿರುವಿಯಾ ಇಲ್ಲವಾ? ನಿನ್ನಂತಹವರಿಗಾಗಿ ಕಾನೂನನ್ನು ರಚಿಸಲಾಗಿದೆ” ಎಂದು ಇನ್ನೋರ್ವ ಹೇಳುವುದು ಕಾಣುತ್ತದೆ.

ತಾನು ಮತ್ತು ಆ ಪುರುಷ ಸಮ್ಮತಿಯೊಂದಿಗೆ ವಿವಾಹವಾಗಿರುವುದಾಗಿ ಮಹಿಳೆ ಪತ್ರಕರ್ತರಿಗೆ ತಿಳಿಸಿದ್ದಾರೆ. “ನಾನು ಪ್ರಬುದ್ಧೆ. ನನಗೆ 22 ವರ್ಷ. ನಾನು ಜುಲೈ 24ರಂದು ನನ್ನ ಸ್ವೈಚ್ಛೆಯೊಂದಿಗೆ ಮದುವೆಯಾಗಿದ್ದೇನೆ. ನಾವು ಮದುವೆಯಾಗಿ 5 ತಿಂಗಳುಗಳಾಗಿವೆ” ಎಂದು ಹೇಳಿದ್ದಾರೆ.

- Advertisement -