ಆಂಧ್ರಪ್ರದೇಶ| ಕನಿಷ್ಠ 140 ಮಂದಿಗೆ ಅಜ್ಞಾತ ಕಾಯಿಲೆ| ಕಲುಷಿತ ನೀರಿನ ಶಂಕೆ

Prasthutha|

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ನಗರದಲ್ಲಿ ಅಜ್ಞಾತ ಕಾಯಿಲೆಗೆ ತುತ್ತಾದ ಮಕ್ಕಳು ಸೇರಿದಂತೆ ಕನಿಷ್ಠ 140 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಮಾಡಿದೆ.

- Advertisement -

ಪರಿಸ್ಥಿತಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ, ಅಧಿಕಾರಿಗಳು ಇದು ಕಲುಷಿತ ನೀರಿನಿಂದ ಬಂದಿರಬಹುದು ಎಂದು ಶಂಕಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆದಾಗ್ಯೂ, ಪರೀಕ್ಷೆಗೆ ಕಳುಹಿಸಲಾದ ನೀರಿನ ಮಾದರಿಗಳ ಫಲಿತಾಂಶಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಅನಾರೋಗ್ಯದ ಕಾರಣವನ್ನು ತಿಳಿಯಲು ರೋಗಿಗಳ ರಕ್ತದ ಮಾದರಿಗಳನ್ನೂ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಮುತ್ಯಲಾ ರಾಜು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ರೋಗಿಗಳು ತಲೆಸುತ್ತುವಿಕೆ, ತಲೆನೋವು ಮತ್ತು ಎಪಿಲೆಪ್ಸಿ ಮಾದರಿಯ ರೋಗಲಕ್ಷಣಗಳಿಂದ ಬಳಲುತ್ತಿದ್ದಾರೆ ಎಂದು ಏಲೂರು ಸರ್ಕಾರಿ ಜನರಲ್ ಆಸ್ಪತ್ರೆಯ ವೈದ್ಯರು ದಿ ಹಿಂದೂಗೆ ತಿಳಿಸಿದ್ದಾರೆ.

ಎಲ್ಲಾ ರೋಗಿಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಅವರಲ್ಲಿ ಶೇ.80ರಷ್ಟು ಜನರು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Join Whatsapp