ಹಿಂದೂ ವಿದ್ಯಾರ್ಥಿನಿಯರ ದರ್ಗಾ ಭೇಟಿ : ಕಾಂಗ್ರೆಸ್ ಜಿಹಾದಿಗಳೆಂದ ಎಫ್ ಬಿ ಖಾತೆಯ ವಿರುದ್ಧ ದೂರುಕೊಟ್ಟ ಪ್ರಾಂಶುಪಾಲರು

Prasthutha: May 24, 2022

ಬೆಳ್ತಂಗಡಿ: ಎನ್ ಎಸ್ ಎಸ್ ಶಿಬಿರಾರ್ಥ ವಿದ್ಯಾರ್ಥಿಗಳು ಪ್ರಾರ್ಥನಾಲಯಗಳಿಗೆ ಭೇಟಿಕೊಟ್ಟ ಚಿತ್ರವನ್ನು ದುರುಪಯೋಗ ಪಡಿಸಿಕೊಂಡು ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಗರುಡ ಹಿಂದೂ ಎಂಬ ಪೇಸ್ಬುಕ್ ಖಾತೆಯ ವಿರುದ್ಧ ಶ್ರೀ ಗುರುದೇವ ಪದವಿ ಕಾಲೇಜಿನ ಪ್ರಾಂಶುಪಾಲರು ದೂರು ದಾಖಲಿಸಿದ್ದಾರೆ.

ಶ್ರೀ ಗುರುದೇವ ಪದವಿ ಕಾಲೇಜಿನ ಎನ್ ಎಸ್ ಎಸ್ ಶಿಬಿರವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ನಪ ಕೋಡಿಯಾಲ್ ಬೈಲ್ ನಲ್ಲಿ ನಡೆದಿತ್ತು.  

ಶಿಬಿರಾರ್ಥಿಗಳು   ಗ್ರಾಮದ ಸ್ಥಳೀಯ ದೇವಸ್ಥಾನ, ಮಂದಿರ, ಮಸೀದಿಗಳಿಗೆ  ಭೇಟಿ ನೀಡಿದ ಸಂದರ್ಭದಲ್ಲಿ ದರ್ಗಾದ ಮುಂದೆ ನಿಂತ ಚಿತ್ರವೊಂದನ್ನು ದುರುಪಯೋಗ ಪಡಿಸಿ  ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಒಡೆತನದ ಕಾಲೇಜಿನ ವಿರುದ್ಧ   ಸಾಮಾಜಿಕ ಜಾಲತಾಣದಲ್ಲಿ ಅಪ ಪ್ರಚಾರ ಮಾಡಿದ  ‘ಗರುಡ ಹಿಂದೂ’ ಪೇಸ್ ಬುಕ್  ಪೇಜ್  ನ ವಿರುದ್ದ ಕಾಲೇಜಿನ ಪ್ರಿನ್ಸಿಪಾಲ್ ಸವಿತಾ ಕೇಸು ದಾಖಲಿಸಿದ್ದಾರೆ.

ಗರುಡ ಹಿಂದೂ ಎಂಬ ಫೇಸ್ಬುಕ್ ಖಾತೆಯಲ್ಲಿ “ಬೆಳ್ತಂಗಡಿಯ ಮಾಜಿ ಶಾಸಕನ ಒಡೆತನದ ಕಾಲೇಜಿನ ಹಿಂದೂ ಹುಡುಗಿಯರನ್ನು , ಮುಸ್ಲಿಂ ಹೆಂಗಸರಿಗೆ ಪ್ರವೇಶವಿಲ್ಲದ ಜಿಹಾದಿಗಳ ದರ್ಗಾಕ್ಕೆ ಕಳಿಸಿದ್ದಾರೆ. ಕಾಂಗ್ರೆಸ್ಸಿಗರ ಉದ್ದೇಶವೇನು ? ಹಿಂದೂಗಳೇ ಇಂತಹ ಜಿಹಾದಿಗಳನ್ನು ಪೋಷಿಸುವ ಕಾಲೇಜಿಗೆ ನಿಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವ ಮುನ್ನ ನೂರು ಬಾರಿ ಯೋಚಿಸಿ “ ಎಂದು ಬರೆದು ಹಂಚಿದ್ದು

ಇದು ಕೋಮು ಭಾವನೆಯನ್ನು ಕೆರಳಿಸುವ ಮತ್ತು ಮಾಜಿ ಶಾಸಕರನ್ನು ತೇಜೋವಧೆ ಮಾಡುವ ಉದ್ದೇಶದಿಂದ ಮಾಡಿದ ಕುಕೃತ್ಯ ಎಂದು ಆರೋಪಿಸಿದ್ದು ಖಾತೆಯ ನಿರ್ವಾಹಕನ ವಿರುದ್ಧ ಕೇಸು ದಾಖಲಿಸಬೇಕೆಂದು ಕಾಲೇಜು ಆಡಳಿತ ಮಂಡಳಿಯು ಬೆಳ್ತಂಗಡಿಯ ಉಪ ನಿರೀಕ್ಷಕರಿಗೆ ದೂರು ನೀಡಿದ್ದಾರೆ. ಮಾಜಿ ಶಾಸಕರಾದ ಕೆ ವಸಂತ ಬಂಗೇರ ಅವರು ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜಿನಲ್ಲಿ ರಿಯಾಯಿತಿ ದರದಲ್ಲಿ ಶಿಕ್ಷಣವನ್ನು ನೀಡುತ್ತಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!