ಹಿಜಾಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ: ಕರ್ನಾಟಕ ಹಿಜಾಬ್ ವಿಚಾರದಲ್ಲಿ ಯು.ಎಸ್

Prasthutha|

ವಾಷಿಂಗ್ಟನ್: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸಿದ ಯುಎಸ್ ಆಫೀಸ್ ಆಫ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ (ಐ ಆರ್ ಎಫ್) ಶುಕ್ರವಾರ ಹಿಜಾಬ್ ನಿಷೇಧವು “ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಮಹಿಳೆಯರು ಮತ್ತು ಹುಡುಗಿಯರನ್ನು ಕಳಂಕಗೊಳಿಸುತ್ತದೆ ಮತ್ತು ಕಡೆಗಣಿಸುತ್ತದೆ” ಎಂದು ಹೇಳಿದೆ.

- Advertisement -

ಟ್ವೀಟ್‌ನಲ್ಲಿ, ಐ ಆರ್‌ ಎಫ್‌ ನ ಯುಎಸ್ ರಾಯಭಾರಿ ರಶಾದ್ ಹುಸೇನ್, “ಧಾರ್ಮಿಕ ಸ್ವಾತಂತ್ರ್ಯವು ಒಬ್ಬರ ಧಾರ್ಮಿಕ ಉಡುಗೆಯನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ” ಎಂದು ಹೇಳಿದರು, ಕರ್ನಾಟಕವು ಧಾರ್ಮಿಕ ಉಡುಪುಗಳ ಅನುಮತಿಯನ್ನು ನಿರ್ಧರಿಸಬಾರದು ಎಂದು ಸೂಚಿಸಿದರು.

ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ, ವಿದ್ಯಾರ್ಥಿಗಳು ತರಗತಿಯೊಳಗೆ ಕೇಸರಿ ಶಾಲುಗಳು, ಹಿಜಾಬ್ ಗಳು, ಧಾರ್ಮಿಕತೆಯನ್ನು ಸಂಕೇತಿಸುವ ವಸ್ತ್ರ ಧರಿಸುವುದನ್ನು ನಿರ್ಬಂಧಿಸಿದೆ.

- Advertisement -

ಕಾನೂನು-ಸುವ್ಯವಸ್ಥೆ ಕಾಪಾಡಲು, ರಾಜ್ಯ ಸರ್ಕಾರವು ಫೆಬ್ರವರಿ 8, 2022 ರಂದು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಆದೇಶ ನೀಡಿತ್ತು.

ಕರ್ನಾಟಕದಲ್ಲಿ ಪ್ರೌಢಶಾಲೆಗಳು ಫೆಬ್ರವರಿ 14 ರಂದು ಪುನರಾರಂಭಗೊಳ್ಳಲಿದ್ದು, ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಕಾಲೇಜುಗಳು ಫೆಬ್ರವರಿ 17 ರಂದು ಪುನರಾರಂಭಗೊಳ್ಳಲಿವೆ.



Join Whatsapp