ಬೆಂಗಳೂರು : ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಆಕ್ಸಿಜನ್ ದುರಂತದ ಮೃತ ಕುಟುಂಬಿಕರಿಗೆ ಪರಿಹಾರ ಮೊತ್ತವಾಗಿ ತಲಾ 5 ಲಕ್ಷ ರೂ, ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ದುರಂತದಿಂದ 24 ಮಂದಿ ಸಾವನ್ನಪ್ಪಿದ್ದರು. ಈ ವೇಳೆ ಆಕ್ಸಿಜನ್ ಕೊರತೆಯಿಂದ ಬೆಳಗ್ಗೆ ರಾತ್ರಿ 13 ಮಂದಿ ಸಾವನ್ನಪ್ಪಿದ್ದರು. 13 ಮೃತರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ನಂತರ ಮೃತಪಟ್ಟ 11 ಜನರಿಗೆ ತಲಾ 2 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಇದೇ ವೇಳೆ ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಕೂಡ ನಡೆಯುತ್ತಿದ್ದು, ಆಯೋಗದ ವರದಿ ನಂತರ ಹೆಚ್ಚುವರಿ ಪರಿಹಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಆಕ್ಸಿಜನ್ ದುರಂತದಲ್ಲಿ ಮೃತರಾದ ಕುಟುಂಬಿಕರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡುವಂತೆ ಇತ್ತೀಚೆಗೆ ಕಾಂಗ್ರೆಸ್ ಸೇರಿದಂತೆ ಎಸ್ ಡಿ ಪಿಐ ಪಕ್ಷಗಳು ಸರಕಾರವನ್ನು ಒತ್ತಾಯಿಸಿ ಧರಣಿಯನ್ನೂ ನಡೆಸಿತ್ತು