ಶಿಯಾ ವಕ್ಫ್ ಬೋರ್ಡಿ ನ ರಿಝ್ವಿ ದಂಡ ಕಟ್ಟದೆ ನುಣುಚಿಕೊಳ್ಳುವಂತಿಲ್ಲ: ಸುಪ್ರೀಂಕೋರ್ಟ್

Prasthutha|

ಕುರ್‌ಆನ್‌ ಸೂಕ್ತಗಳನ್ನು ತೆಗೆದುಹಾಕುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಪ್ರಕರಣ

- Advertisement -

ಹೊಸದಿಲ್ಲಿ: ಪವಿತ್ರ ಕುರ್‌ಆನ್‌ನಿಂದ ಕೆಲವು ಸೂಕ್ತಗಳನ್ನು ತೆಗೆದುಹಾಕುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದಕ್ಕಾಗಿ ಉತ್ತರ ಪ್ರದೇಶದ ಮಾಜಿ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ಸೈಯದ್ ವಸೀಮ್ ರಿಝ್ವಿ 50,000 ರೂ.ಗಳ ದಂಡ ಕಟ್ಟಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ತನಗೆ ವಿಧಿಸಲಾಗಿದ್ದ 50,000 ರೂ.ಗಳ ದಂಡವನ್ನು ಮನ್ನಾ ಮಾಡುವಂತೆ ರಿಝ್ವಿ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ರಿಝ್ವಿ ಯಾವಾಗ ದಂಡ ಪಾವತಿಸುತ್ತಾರೆ ಎಂದು ನ್ಯಾಯಮೂರ್ತಿ ರೋಹಿಂಗ್ಟನ್ ಫಾಲ್ ನಾರಿಮನ್ ಈ ವೇಳೆ ವಕೀಲರನ್ನು ಕೇಳಿದ್ದಾರೆ.

Join Whatsapp