ಅಲ್ಪಸಂಖ್ಯಾತ ಕೋಟಾ ಪ್ರಶ್ನಿಸಿದ ಹಿಂದೂ ಸೇವಾಕೇಂದ್ರಕ್ಕೆ ಹೈಕೋರ್ಟ್ ದಂಡದೇಟು !

Prasthutha|

ಕೇರಳ : ಅಲ್ಪಸಂಖ್ಯಾತರ ಕೋಟಾವನ್ನು ಪ್ರಶ್ನಿಸಿದ ಕೇರಳದ ಹಿಂದೂ ಸೇವಾ ಕೇಂದ್ರ ಸಂಸ್ಥೆಗೆ ಹೈಕೋರ್ಟ್ ದಂಡ ವಿಧಿಸಿ ಆದೇಶ ನೀಡಿದೆ. ಬೇರೆ ಧರ್ಮಕ್ಕೆ ಮತಾಂತರಗೊಂಡಿರುವವರು ಪರಿಶಿಷ್ಟ ಜಾತಿಗೆ ಸೇರಿದವರು ಹಾಗೂ ಅವರನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಘೋಷಿಸಿ ಎಂದು ಹೈಕೋರ್ಟಿಗೆ ಹಿಂದೂ ಸೇವಾಕೇಂದ್ರ ಸಂಸ್ಥೆ ಅರ್ಜಿ ಸಲ್ಲಿಸಿತ್ತು., ಅರ್ಜಿದಾರ ಹಿಂದು ಸೇವಾಕೇಂದ್ರ ಖಜಾಂಚಿ ಶ್ರೀಕುಮಾರ ಮಂಕುಝಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಹಿಂದೂ ಸೇವಾಕೇಂದ್ರ ಸಂಸ್ಥೆಗೆ 25,000 ರೂ. ಗಳ ದಂಡವನ್ನು ವಿಧಿಸಿ ಆದೇಶಿಸಿದೆ.

- Advertisement -

ದಂಡದ ಮೊತ್ತವನ್ನು ಒಂದು ತಿಂಗಳಿನೊಳಗೆ ರಾಜ್ಯದಲ್ಲಿ ಅಪರೂಪದ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯಾರ್ಥವಾಗಿ ತೆರೆದಿರುವ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಸೇವಾಕೇಂದ್ರಕ್ಕೆ ಸೂಚನೆ ನೀಡಿದೆ. ಅದಲ್ಲದೇ ತಪ್ಪಿದ್ದಲ್ಲಿ ಕೇರಳ ಕಂದಾಯ ವಸೂಲಿ ಕಾಯ್ದೆ 1968ರ ಅಡಿ ಅನ್ವಯ ಕ್ರಮ ಜರುಗಿಸಿಲಾಗುವುದು ಎಂದು ಎಚ್ಚರಿಸಿದೆ.



Join Whatsapp