ವಿವಾದಾತ್ಮಕ ಹೇಳಿಕೆ | ಯೋಗಗುರು ಬಾಬಾ ರಾಮ್‌ದೇವ್‌ಗೆ ದೆಹಲಿ ಹೈಕೋರ್ಟ್‌ ಸಮನ್ಸ್‌

Prasthutha|

ನವದೆಹಲಿ : ಅಲೋಪಥಿಕ್‌ ವೈದ್ಯಕೀಯ ವ್ಯವಸ್ಥೆ ಬಗ್ಗೆ ಆಕ್ಷಾಪಾರ್ಹ ಹೇಳಿಕೆ ನೀಡಿ ವೈದ್ಯರ ಕೆಂಗಣ್ಣಿಗೆ ಗುರಿಯಾಗಿದ್ದ ಯೋಗಗುರು ಬಾಬಾ ರಾಮ್‌ದೇವ್‌ ವಿರುದ್ಧ ದೆಹಲಿ ವೈದ್ಯಕೀಯ ಸಂಸ್ಥೆ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ.

- Advertisement -

ರಾಮ್‌ದೇವ್‌ ರ ಪತಂಜಲಿಯು ತನ್ನ ಕೊರೊನಿಲ್‌ ಕಿಟ್‌ ನಿಂದ ಕೋವಿಡ್‌ ವೈರಸ್‌ ನಿಂದ ಗುಣಮುಖರಾಗಬಹುದು ಎಂದು ಹೇಳಿಕೊಳ್ಳುತ್ತಿದೆ ಎಂದು ಡಿಎಂಎ ಆಪಾದಿಸಿತ್ತು. ಅಲ್ಲದೆ, ವೈದ್ಯರ ಬಗ್ಗೆ ರಾಮ್‌ದೇವ್‌ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಯಿಂದಾಗಿ ವೈದ್ಯರು, ವಿಜ್ಞಾನಿಗಳ ಗೌರವಕ್ಕೆ ಧಕ್ಕೆ ತಂದಿದೆ ಎಂದೂ ಡಿಎಂಎ ಪ್ರತಿಪಾದಿಸಿದೆ.

ಜು.13ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಲ್ಲಿಯ ವರೆಗೆ ಯಾವುದೇ ಪ್ರಚೋದನಕಾರಿ ಹೇಳಿಕೆಯನ್ನು ನೀಡಬಾರದು ಮತ್ತು ಈ ವಿಚಾರವಾಗಿ ಪ್ರತಿಕ್ರಿಯಿಸಬಾರದು ಎಂದು ಕೋರ್ಟ್‌ ರಾಮ್‌ದೇವ್‌ಗೆ ಮೌಖಿಕ ಸಲಹೆ ನೀಡಿದೆ. ಅಲೋಪಥಿಕ್‌ ವೈದ್ಯ ವ್ಯವಸ್ಥೆ ಅವಿವೇಕಿತನದ್ದು ಎಂದು ಬಾಬಾ ರಾಮ್‌ದೇವ್‌ ಹೇಳಿಕೆ ನೀಡಿದ್ದುದು ವೈರಲ್‌ ಆಗಿದೆ.



Join Whatsapp