ಕರ್ನಾಟಕದಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ : ಸಿಎಂ ಘೋಷಣೆ

Prasthutha|

ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಮತ್ತೆ ಒಂದು ವಾರಗಳ ಕಾಲ ಮುಂದೂಡಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಮತ್ತಷ್ಟು ನಿಯಂತ್ರಿಸುವ ಸಲುವಾಗಿ ತಜ್ಞರ ಸಲಹೆಯಂತೆ  ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ  ಲಾಕ್ಡೌನ್ ಅನ್ನು ಮತ್ತೆ ಒಂದು ವಾರಗಳ ಕಾಲ ವಿಸ್ತರಿಸಿ ಆದೇಶ ನೀಡಿದ್ದಾರೆ.

ರಾಜ್ಯ ಸರಕಾರ ಈ ಹಿಂದೆ ಮೊದಲನೇ ಬಾರಿಗೆ ಮೇ 10 ರಂದು ಹದಿನೈದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿತ್ತು, ಎರಡನೇ ಬಾರಿಗೆ ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿತ್ತು, ಇದೀಗ ಮೂರನೇ ಬಾರಿಗೆ ಒಂದು ವಾರಗಳ ಕಾಲ ಜೂನ್ 14ರ ತನಕ ಲಾಕ್ ಡೌನ್ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

- Advertisement -