ಹೈದರಾಬಾದ್ : ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ವಿರುದ್ಧ ಪ್ರಕರಣ ದಾಖಲಾಗಿದ್ದು ಅದನ್ನು ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ಹಿಂದೇಟು ಹಾಕಿದೆ.
ಭಜರಂಗದಳದ ಮುಖಂಡರು ಸಾಯಿ ಪಲ್ಲವಿ, ಟಿವಿ ಸಂದರ್ಶನವೊಂದರಲ್ಲಿ ಹಿಂದೂಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದರು ಎಂದು ಆರೋಪಿಸಿ
ಅವರ ವಿರುದ್ಧ ದೂರು ನೀಡಿದ್ದರು.
ಕಾನೂನು ಸಲಹೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕೇಸ್ ರದ್ದುಗೊಳಿಸುವಂತೆ ಕೋರಿ ಸಾಯಿ ಪಲ್ಲವಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಆದರೆ ನಟಿಯ ಅರ್ಜಿಯನ್ನ ವಜಾಗೊಳಿಸಿರುವ ತೆಲಂಗಾಣದ ಉಚ್ಛ ನ್ಯಾಯಾಲಯ, ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.