ಕೊಡಗಿನಲ್ಲಿ ಹೈ ಅಲರ್ಟ್: ಎಸ್.ಪಿ ಕಚೇರಿಯಲ್ಲಿ ಸಭೆ ನಡೆಸುತ್ತಿರುವ ಐಜಿಪಿ

Prasthutha|

ಮಡಿಕೇರಿ: ದಕ್ಷಿಣ ವಲಯ ಐಜಿಪಿ ಮಧುಕರ್ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಮಡಿಕೇರಿಯಲ್ಲಿ ಎಸ್.ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತಿದ್ದಾರೆ.

- Advertisement -

ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆಯಿಂದಾಗಿ ಆಕ್ರೋಶಗೊಂಡಿರುವ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಆಗಸ್ಟ್ 26 ರಂದು ಮಡಿಕೇರಿ ಚಲೋ ಹೋರಾಟ ಘೋಷಿಸಲಾಗಿತ್ತು. ಬಳಿಕ ಮಡಿಕೇರಿಯಲ್ಲಿ ಅದೇ ದಿನ ಬೃಹತ್ ಸಮಾವೇಶ ನಡೆಸುವುದಾಗಿ ಕೊಡಗು ಬಿಜೆಪಿ ಘೋಷಿಸಿತು.

ಎರಡು ರಾಜಕೀಯ ಪಕ್ಷಗಳು ಒಂದೇ ದಿನ ದೊಡ್ಡ ಮಟ್ಟದ ಸಮಾವೇಶ ನಡೆಸುವುದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಹೆಚ್ಚಾಗಿತ್ತು. ಪರಿಣಾಮ ಕೊಡಗು ಜಿಲ್ಲಾಡಳಿತ ಆಗಸ್ಟ್ 24 ರಿಂದ 27 ರ ವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಐಜಿಪಿ ಮಧುಕರ್ ಇಂದು ಬೆಳಿಗ್ಗೆ ಜಿಲ್ಲೆಗೆ ಭೇಟಿ ನೀಡಿದ್ದು, ಭದ್ರತೆ ಸಂಬಂಧ ಪರಿಶೀಲನೆ ಮಾಡುತ್ತಿದ್ದು, ನಾಳೆಯಿಂದ ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಎಸ್.ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತಿದ್ದಾರೆ.

Join Whatsapp